ಬಿಬಿಎಂಪಿ ಮುಖ್ಯ ಆಯುಕ್ತರ ಭಾವಚಿತ್ರ ದುರ್ಬಳಕೆ: ಎಫ್‍ಐಆರ್ ದಾಖಲು

Update: 2022-10-03 14:38 GMT
ತುಷಾರ್ ಗಿರಿನಾಥ್

ಬೆಂಗಳೂರು, ಅ. 3: ಅನುಮತಿಯಿಲ್ಲದೇ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಭಾವಚಿತ್ರವನ್ನು ಅಳಡಿಕೊಂಡ ವಾಟ್ಸ್ ಆಪ್ ಸಂಖ್ಯೆಯಿಂದ ಸಂದೇಶ ಕಳುಹಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. 

ಅ.2ರಂದು ತುಷಾರ್ ಗಿರಿನಾಥ್ ಅವರು ಭಾವಚಿತ್ರವನ್ನು ಅಳವಡಿಸಿಕೊಂಡಿರುವ ಅಪರಿಚಿತ ವ್ಯಕ್ತಿಯ 8076618135 ವಾಟ್ಸ್ ಅಪ್ ಸಂಖ್ಯೆಯಿಂದ ಬಿಬಿಎಂಪಿಯ ಅಧಿಕಾರಿಯೊಬ್ಬರಿಗೆ ತಪ್ಪಾಗಿ ಸಂದೇಶವನ್ನು ಕಳುಹಿಸಲಾಗಿದೆ. ಹಾಗಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ದೂರು ದಾಖಲಿಸಿದ್ದಾರೆ.

ದೂರನ್ನು ಆಧಾರಿಸಿ ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News