ಮಂಗಳೂರು: ಬ್ಯಾರಿ ಭಾಷಾ ದಿನಾಚರಣೆ

Update: 2022-10-04 10:21 GMT

ಮಂಗಳೂರು, ಅ.4: ನಗರದ ವೆಲೆನ್ಸಿಯಾದಲ್ಲಿರುವ ಸೌಂಡ್ ವೇವ್ ಆಡಿಯೋ- ವೀಡಿಯೋ ರೆಕಾರ್ಡಿಂಗ್ ಸ್ಟುಡಿಯೋದ ವತಿಯಿಂದ ಸೋಮವಾರ ಸಂಜೆ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವು ನಡೆಯಿತು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಪುರಸ್ಕೃತ ಲ. ಡಾ. ಇ.ಕೆ.ಎ.ಸಿದ್ದೀಕ್ ಅಡ್ಡೂರು ದಫ್ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಬ್ಯಾರಿ ವಾರ್ತೆಯ ಸಂಪಾದಕ ಬಶೀರ್ ಬೈಕಂಪಾಡಿ, ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಓಸ್ವಾಲ್ಡ್ ಪುರ್ಟಾಡೊ, ದಿ ವಾಯ್ಸ್ ಆಫ್ ಬ್ಲಡ್ ಡೋನಸ್ ಮಂಗಳೂರು ಇದರ ಅಧ್ಯಕ್ಷ ರವೂಫ್ ಬಂದರ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್, ಮಜೀದ್ ಸೂರಲ್ಪಾಡಿ, ಬ್ಯಾರಿ ಝುಲ್ಫಿ ಅತಿಥಿಗಳಾಗಿ ಭಾಗವಹಿಸಿದ್ದರು. ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ಸಮದ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಕವಿ ಮುಹಮ್ಮದ್ ಬಡ್ಡೂರ್ ಅಧ್ಯಕ್ಷತೆಯಲ್ಲಿ ಬ್ಯಾರಿ ಕವಿಗೋಷ್ಠಿ ನಡೆಯಿತು. ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಕವಿಗಳಾದ ಹುಸೈನ್ ಕಾಟಿಪಳ್ಳ, ಝೈನುದ್ದೀನ್ ಕಾಟಿಪಳ್ಳ, ಎಂ.ಪಿ.ಬಶೀರ್ ಬಂಟ್ವಾಳ, ಸಮದ್ ಕಾಟಿಪಳ್ಳ ಭಾಗವಹಿಸಿದ್ದರು. ರಿಯಾಝ್ ಅಶ್ರಫ್ ಕಲಾಕಾರ್ ಕಾರ್ಯಕ್ರಮ ನಿರೂಪಿಸಿದರು.

ಕವಿಗೋಷ್ಠಿಯ ನಂತರ ಬ್ಯಾರಿ, ಹಿಂದಿ, ಕನ್ನಡ ಭಾಷೆಗಳ ಭಾಷಾ ಸಾಮರಸ್ಯ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಯು.ಹೆಚ್. ಖಾಲಿದ್ ಉಜಿರೆ, ಸಮದ್ ಕಾಟಿಪಳ್ಳ, ಸರ್ಫ್ರಾಝ್ ಆಲಂ, ಸುಹೈಲ್ ಬಡ್ಡೂರು, ಅಝರ್ ದಾಜಿನ್, ಶಾಝಿಲ್ ಹಸನ್ ಗಾಯಕರಾಗಿ ಭಾಗವಹಿಸಿದ್ದರು. ಫೈಝ್ ಕಾಟಿಪಳ್ಳ ಕಾರ್ಯಕ್ರಮ ಸಂಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News