×
Ad

ದೇವನಹಳ್ಳಿ: ಗ್ರಾಮ ಪಂಚಾಯತ್ ಕಟ್ಟಡಕ್ಕೆ ಚಪ್ಪಲಿ ಹಾರ ಹಾಕಿದ ನೌಕರ!

Update: 2022-10-04 16:48 IST

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಸಿಬ್ಬಂದಿಯೊಬ್ಬ ರವಿವಾರ ರಾತ್ರಿ  ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಈ ಸಂಬಂಧ ದೇವನಹಳ್ಳಿ ತಾಲೂಕು ಪಂಚಾಯಿತ್ ಇಒ ವಸಂತ್ ಕುಮಾರ್ ಸೂಚನೆ ಮೇರೆಗೆ ಪಿಡಿಒ ಶಿವರಾಜ್ ವಿಜಯಪುರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. 

ಆವತಿ ಪಂಚಾಯತ್ ನ ಸ್ವಚ್ಛತಾ ಕೆಲಸಗಾರನೊಬ್ಬ ಈ ಕೃತ್ಯ ಎಸಗಿರುವುದು ಸಿ.ಸಿ.ಟಿ.ವಿ ದೃಶ್ಯಾವಳಿಗಳಿಂದಾಗಿ ಬೆಳಕಿಗೆ ಬಂದಿದ್ದು, ಪ್ರತಿ ವರ್ಷದಂತೆ ದಸರಾ ಹಬ್ಬಕ್ಕೆ ಸಮವಸ್ತ್ರ, ಬೋನಸ್‌ ನೀಡಲಿಲ್ಲ ಎಂದು ಬೇಸರಗೊಂಡು ಈ ಕೃತ್ಯ ಎಸಗಿದ್ದಾನೆನ್ನಲಾಗಿದೆ. 

ಪಂಚಾಯತ್‍ಗೆ ಭೇಟಿ ನೀಡಿದ ದೇವನಹಳ್ಳಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್, ಸ್ವಚ್ಛತಾ ಕೆಲಸಗಾರನಿಗೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News