×
Ad

ಜೆಡಿಎಸ್‌ನ 20 ಶಾಸಕರ ಜೊತೆ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ ಹೆಚ್. ಡಿ. ಕುಮಾರಸ್ವಾಮಿ

Update: 2022-10-04 18:25 IST
Photo credit- ANI

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು (HD Kumaraswamy) ತಮ್ಮ ಜೆಡಿಎಸ್ ಪಕ್ಷದ 20 ಶಾಸಕರ ಜೊತೆ ಇಂದು ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದಾರೆ.

ವಿಶೇಷ ವಿಮಾನದಲ್ಲಿ ತಮ್ಮ ಪುತ್ರ ನಿಖೀಲ್ ಕುಮಾರಸ್ವಾಮಿ ಹಾಗೂ  ಶಾಸಕರ ಜೊತೆ ಪ್ರಯಾಣ ಬೆಳೆಸಿರುವ ಅವರು, ಇಂದು ಮತ್ತು ನಾಳೆ ಹೈದರಾಬಾದ್‌ನಲ್ಲಿ ವಾಸ್ತವ್ಯವಿರಲಿದ್ದಾರೆ ಎಂದು ತಿಳಿದು ಬಂದಿದೆ.

ನಾಳೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನೂತನ ಪಕ್ಷ ಸ್ಥಾಪನೆ ಘೋಷಣೆ ಮಾಡಲಿದ್ದು, ಅವರ ಆಹ್ವಾನದ ಮೇರೆಗೆ HDK ತಂಡ ನಾಳೆ ಆ ಸಮಾರಂಭದಲ್ಲಿ ಭಾಗಿಯಾಗಲಿದೆ ಎಂಬ ಮಾಹಿತಿ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News