×
Ad

ಬೆಂಗಳೂರು: ನಾಯಿಯನ್ನು ಹಗ್ಗದಿಂದ ಕಟ್ಟಿ ಹಲ್ಲೆ ನಡೆಸಿದ ಯುವಕರು; ವಿಡಿಯೋ ವೈರಲ್

Update: 2022-10-04 21:04 IST

ಬೆಂಗಳೂರು: ಯುವಕರಿಬ್ಬರು ನಾಯಿಯನ್ನು ಹಗ್ಗದದಿಂದ ಕಟ್ಟಿ ಥಳಿಸಿ, ವಿಕೃತಿ ಮೆರೆದಿರುವ ಘಟನೆ ಕೆ.ಆರ್‌.ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ನಿನ್ನೆ (ಸೋಮವಾರ) ರಾತ್ರಿ ಸಾಕಿದ ನಾಯಿಯೊಂದು ಬೊಗಳಿದ್ದಕ್ಕೆ ಇಬ್ಬರು ಯುವಕರು ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಬಳಿಕ ನಾಯಿಯ ಮಾಲಕ ಗಾಯಗೊಂಡ ನಾಯಿಯನ್ನು ಪಶು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವಕರಿಬ್ಬರು ನಾಯಿಗೆ ದೊಣ್ಣೆಯಿಂದ ಹೊಡೆಯುವ ವಿಡಿಯೋ ಒಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. 

ಈ ಸಂಬಂಧ ಕೆ.ಆರ್.ಪುರಂ ಪೊಲೀಸ್​ ಠಾಣೆಯಲ್ಲಿ ನಾಯಿಯ ಮಾಲಕರು ನೀಡಿರುವ  ದೂರಿನ ಮೇರೆಗೆ  ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News