ಟೈಟನ್ ಬಿಸಿನೆಸ್ ಅವಾರ್ಡ್-2022 ಪಡೆದ ಸಿಎಂ ಪುತ್ರ ಭರತ್ ಬಿ. ಬೊಮ್ಮಾಯಿ

Update: 2022-10-07 16:25 GMT
 ಭರತ್ ಬಿ. ಬೊಮ್ಮಾಯಿ

ಬೆಂಗಳೂರು, ಅ.7: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ, ಯುವ ಉದ್ಯಮಿ ಭರತ್ ಬಿ ಬೊಮ್ಮಾಯಿ ಅವರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಟೈಟನ್ ಬಿಸಿನೆಸ್ ಅವಾರ್ಡ್-2022 ಲಭಿಸಿದೆ.

ಅಶ್ವ ಎನರ್ಜಿ ಮತ್ತು ವಾಲ್ಟೆಕ್ ಎಂಬ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ಭರತ್ ಬಿ ಬೊಮ್ಮಾಯಿ ಅವರು ಉತ್ಪಾದನೆ ವಿಭಾಗದಲ್ಲಿ ವರ್ಷದ ಜಾಗತಿಕ ವಾಣಿಜ್ಯೋದ್ಯಮಿಯಾಗಿ ಹೊರಹೊಮ್ಮಿದ್ದು 2022ರ-ಟೈಟನ್ ಬಿಸಿನೆಸ್ ಅವಾರ್ಡ್- ಸೀಸನ್ 2 ರಲ್ಲಿ ನಿರ್ಣಾಯಕ ವಿಜಯವನ್ನು ಸಾಧಿಸಿದ್ದಾರೆ.

ಸೀಸನ್ 2ರ ಸ್ಪರ್ಧೆಗೆ ಯುಎಸ್‍ಎ, ಯುನೈಟೆಡ್ ಕಿಂಗ್‍ಡಮ್ ಸೇರಿ ಸುಮಾರು 55 ದೇಶಗಳಿಂದ 1000 ಹೆಚ್ಚು ಪ್ರವೇಶಗಳು ಬಂದಿದ್ದವು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ಎಲ್ಲ ಉದ್ಯಮಗಳಿಗೂ ಪ್ರವೇಶವನ್ನು ಮುಕ್ತವಾಗಿ ತೆರೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News