ಕಿನ್ಯ ಹುಸೈನ್ ಕುಂಞಿ ಹಾಜಿ

Update: 2022-10-08 07:36 GMT

ಉಳ್ಳಾಲ, ಅ.8: ಚಾಯರ ವಲಚಲ್ ಇಸ್ಮಾಯೀಲ್ ಹಾಜಿಯವರ ಪುತ್ರ ಹುಸೈನ್ ಕುಂಞಿ ಹಾಜಿ ಕಿನ್ಯ(86) ಅಲ್ಪಕಾಲದ ಅನಾರೋಗ್ಯದಿಂದಾಗಿ ಶನಿವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

 ಕಾಂಗ್ರೆಸ್ ಮುಖಂಡರಾಗಿದ್ದ ಹುಸೈನ್ ಕುಂಞಿ ಹಾಜಿಯವರು ವಕ್ಫ್ ಬೋರ್ಡ್ ಸದಸ್ಯರಾಗಿ, ಕಿನ್ಯ ಗ್ರಾಪಂ ಅಧ್ಯಕ್ಷರಾಗಿ, ತಲಪಾಡಿ ಮಂಡಲ ಪಂಚಾಯತ್ ಸದಸ್ಯರಾಗಿ, ಕಿನ್ಯ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಕುರಿಯಕ್ಕಾರ್ ಮನೆತನದವರಾಗಿದ್ದ ಮೃತರು ಓರ್ವ ಪುತ್ರ, ಆರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸಂತಾಪ: ಹುಸೈನ್ ಕುಂಞಿಹಾಜಿ ನಿಧನಕ್ಕೆ ಸೈಯದ್ ಆಟಕೋಯ ತಂಙಳ್ ಯಾನೆ ಅಬ್ಬು ತಂಙಳ್, ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹೀಂ ಹಾಜಿ ಕೋಡಿಜಾಲ್, ಹೈದರ್ ಪರ್ತಿಪ್ಪಾಡಿ, ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಜೆಡಿಎಸ್ ಮುಖಂಡ ನಝೀರ್ ಉಳ್ಳಾಲ, ಕಿನ್ಯ ಪಂಚಾಯತ್ ಮಾಜಿ ಅಧ್ಯಕ್ಷ ಹಮೀದ್ ಕಿನ್ಯ, ಕಿನ್ಯ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಖಜಾಂಚಿ ಬಾವು ಹಾಜಿ ಸಾಗ್ ಬಾಗ್, ವಾದಿತ್ವಯ್ಬ ವಾಫಿ ಕಾಲೇಜಿನ ಖಜಾಂಚಿ ಅಬೂ ಸಾಲಿ ಹಾಜಿ, ಕೆ.ಐ.ಮುಹಮ್ಮದ್ ಚಾಕಟ್ಟೆಪಡ್ಪು, ಕಿನ್ಯ ಮುದರ್ರಿಸ್ ಮಜೀದ್ ದಾರಿಮಿ, ಇಬ್ನು ಕುತುಬಿ ನೌಫಲ್ ಫೈಝಿ, ಡಾ.ಸಿರಾಜುದ್ದೀನ್ ತಂಙಳ್, ಕಿನ್ಯ ಜಮಾಅತ್ ಮಾಜಿ ಮುದರ್ರಿಸರಾದ ಇಸ್ಮಾಯೀಲ್ ಫೈಝಿ, ಖಾಸಿಂ ದಾರಿಮಿ, ಫತ್ತಾಹ್ ಫೈಝಿ, ಅಮೀರ್ ತಂಙಳ್ ಕಿನ್ಯ, ಬಾತಿಶ್ ತಂಙಳ್ ಆನೇಕಲ್, ಕಿನ್ಯ ಕುತುಬಿಯ ಹಳೆ ವಿದ್ಯಾರ್ಥಿ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಕಿನ್ಯ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ