×
Ad

ಬೆಂಗಳೂರು: ನಶೆ ಬರುವ ಸಿರಪ್ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Update: 2022-10-08 15:52 IST

ಬೆಂಗಳೂರು: ನಶೆ ಬರುವ ಮಾದಕ ವಸ್ತುಯುಕ್ತ ಸಿರಪ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಜೆಪಿ ನಗರ ಪೊಲೀಸರು ಅಮಾನ್ ಉಲ್ಲಾ ಎಂಬುವವನ್ನು ಬಂಧಿಸಿದ್ದಾರೆ. 

ನಗರದ ವಿಜಯನಗರದ ಮೆಡಿಕಲ್ ಶಾಪ್‌ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಪಿ ಅಮಾನ್ ಉಲ್ಲಾ, ಇಮ್ರಾನ್ ಎಂಬಾತನಿಂದ ನಿಷೇಧಿತ ಎಸ್ಕೂಪ್ ಹೆಸರಿನ ಸಿರಪ್ ಖರೀದಿ ಮಾಡಿದ್ದ. ಜೆ.ಪಿ. ನಗರ ಆಕ್ಸ್‌ಫರ್ಡ್ ಗ್ರೌಂಡ್ ಬಳಿ ಯುವಕರಿಗೆ ಮಾರಲು ಯತ್ನಿಸುತ್ತಿದ್ದ. ಈ ವೇಳೆ ಮಾಹಿತಿ ಪಡೆದು ಆರೋಪಿಯನ್ನ ಬಂಧಿಸಿ 356 ಬಾಟಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್ಕೂಪ್ ಸಿರಪ್ ನಲ್ಲಿ ಕೊಡೈನ್ ಎಂಬ ಮಾದಕ ವಸ್ತುವಿನ ಅಂಶವಿದ್ದು, ಈ ಸಿರಪ್ ನೋವು ಮತ್ತು ಕೆಮ್ಮಿನ ಚಿಕಿತ್ಸೆಗೆ ಬಳಸಲಾಗುತ್ತದೆ. ಮಾದಕ‌ ಅಂಶ ಇರುವುದರಿಂದ ಈ ಸಿರಪ್ ಅನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ. ಕಡಿಮೆ ಬೆಲೆಗೆ ಸಿಗುವ ಈ ಸಿರಪ್ ನ ಮಾದಕ ವ್ಯಸನಿಗಳು ನಶೆ ಏರಿಸಿಕೊಳ್ಳುತ್ತಾರೆ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News