5ಜಿ ಹೆಸರಿನಲ್ಲಿ ವಂಚನೆ ಸಾಧ್ಯತೆ: ಎಚ್ಚರ ವಹಿಸಿ ಎಂದ ಪೊಲೀಸರು

Update: 2022-10-09 13:24 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಮೊಬೈಲ್ ನೆಟ್‍ವರ್ಕ್ 5ಜಿ(5G) ಹೆಸರಿನಲ್ಲಿ ಸೈಬರ್ ವಂಚಕರು ಮೋಸ ಮಾಡುವ ಸಾಧ್ಯತೆ ಇದ್ದು, ಈ ಬಗ್ಗೆ ನಾಗರಿಕರು ಜಾಗೃತಿವಹಿಸಿ ಎಂದು ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆ ನೀಡಿದ್ದಾರೆ.

5ಜಿ ಸೇವೆ ಆರಂಭ ಹಿನ್ನೆಲೆ ಆನ್‍ಲೈನ್ ವಂಚಕ 4ಜಿ ಯಿಂದ 5ಜಿಗೆ ನಿಮ್ಮ ಸಿಮ್ ಕಾರ್ಡ್ ಅನ್ನು ಅಪ್‍ಡೇಟ್ ಮಾಡಿಕೊಡುವುದಾಗಿ ಹೇಳಿ ಒಟಿಪಿ ಪಡೆದು ಗ್ರಾಹಕರ ಖಾತೆಗಳ ಹಣ ದೋಚುವ ಸಾಧ್ಯತೆ ಇದೆ. ಈ ಬಗ್ಗೆ ಪೊಲೀಸ್ ಇಲಾಖೆ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, 4ಜಿ ಯಿಂದ 5ಜಿಗೆ ಅಪ್ಡೇಟ್ ಮಾಡಿಕೊಡುವುದಾಗಿ ಹೇಳಿ ಯಾರಾದರೂ ಕರೆ ಮಾಡಿ, ಒಟಿಪಿ ಕೇಳಿದರೆ ಕೊಡಬಾರದು ಎಂದು ಜನರಿಗೆ ಸಲಹೆ ನೀಡಿದೆ. 

ಅಲ್ಲದೆ, ಪ್ರಧಾನಿ ಮೋದಿ ಅವರು ಅ.1ರಂದು ದೇಶದಲ್ಲಿ 5ಜಿ ದೂರಸಂಪರ್ಕ ಸೇವೆಗಳಿಗೆ ಚಾಲನೆ ನೀಡಿದರು. ಅದರ ಬೆನ್ನಿಗೇ ಹಲವು ಟೆಲಿಕಾಂ ಕಂಪನಿಗಳು ಹಲವು ನಗರಗಳಲ್ಲಿ 5ಜಿ ಸೇವೆ ನೀಡಲಾರಂಭಿಸಿವೆ. ಆಯ್ದ 13ನಗರಗಳಿಗೆ ಮಾತ್ರವೇ ಜಾರಿಯಲ್ಲಿರುವ 5ಜಿ ಸೇವೆ ಇನ್ನು ಒಂದೆರಡು ವರ್ಷಗಳಲ್ಲಿ ದೇಶದಾದ್ಯಂತ ಲಭ್ಯವಾಗಲಿದೆ.  

ಇದನ್ನೂ ಓದಿ: ಮತಾಂತರ ಕಾರ್ಯಕ್ರಮದಲ್ಲಿ ಹಾಜರಿದ್ದ ಕುರಿತು ವಿವಾದ: ದಿಲ್ಲಿ ಆಪ್‌ ಸಚಿವ ರಾಜೀನಾಮೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News