ಬೆಂಗಳೂರು: ಹೊತ್ತಿ ಉರಿದ ಕ್ಯಾಂಟರ್; ಚಾಲಕ ಪಾರು
Update: 2022-10-09 20:28 IST
ಬೆಂಗಳೂರು: ಕ್ಯಾಂಟರ್ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗಿರುವ ಘಟನೆ ಇಂದು ಸಂಜೆ ಬೆಂಗಳೂರು ಮೈಸೂರು ನಡುವಿನ ನೈಸ್ ರಸ್ತೆಯಲ್ಲಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗುಜರಾತ್ ನೋಂದಣಿಯ ವಾಹನದ ಚಾಲಕ ನೂರ್ ಸಲೀಂ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳದಿಂದ ನೈಸ್ ರೋಡ್ ಮುಖಾಂತರ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.