ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮಾತೃವಿಯೋಗ
Update: 2022-10-11 09:23 IST
ಬಂಟ್ವಾಳ, ಅ.11: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ತಾಯಿ, ಉಳಿಪಾಡಿಗುತ್ತು ಸರೋಜಿನಿ ನಾಯ್ಕ್ (90) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೋಮವಾರ ರಾತ್ರಿ ನಿಧನ ಹೊಂದಿದ್ದಾರೆ.
ಸರೋಜಿನಿ ಅವರು ಪೊಳಲಿ ದೇವಸ್ಥಾನದ ಆಡಳಿತದ ಒಂದು ಮನೆತನವಾದ ಉಳಿಪ್ಪಾಡಿಗುತ್ತು ದಿ.ರಮೇಶ್ ನಾಯ್ಕ್ ಅವರ ಪತ್ನಿಯಾಗಿದ್ದಾರೆ.
ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಇಂದು ರಾತ್ರಿ ಸುಮಾರು 10 ಗಂಟೆ ವೇಳೆ ಒಡ್ಡೂರು ಫಾರ್ಮ್ಸ್ ನ ಪುತ್ರ, ಶಾಸಕ ರಾಜೇಶ್ ನಾಯ್ಕ್ ಅವರ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ನಾಳೆ 10 ಗಂಟೆಗೆ ಒಡ್ಡೂರು ಫಾರ್ಮ್ಸ್ ನಲ್ಲಿ ನಡೆಯಲಿದೆ.