ಬೆಂಗಳೂರು | ಕಟ್ಟಡದ ಛಾವಣಿ ಕುಸಿತ: ಇಬ್ಬರು ಮೃತ್ಯು; ಮೂವರು ಗಂಭೀರ
ಬೆಂಗಳೂರು, ಅ.11: ಕಟ್ಟಡದ ಮೇಲ್ಛಾವಣಿ ಕುಸಿದು ಮೈಮೇಲೆ ಬಿದ್ದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡಿ ಸಮೀಪದ ಗ್ರಾಫೈಟ್ ಇಂಡಿಯಾ ಬಳಿ ಮಂಗಳವಾರ ಮುಂಜಾನೆ ನಡೆದಿದೆ.
ಮೃತರನ್ನು ಬಿಹಾರ ಮೂಲದ ಅರ್ಮಾನ್( 27) ಮತ್ತು ಝೈನುದ್ದೀನ್ (38) ಎಂದು ಗುರುತಿಸಲಾಗಿದೆ.
ಗ್ರಾಫೈಟ್ ಇಂಡಿಯಾ ಬಳಿ ಖಾಸಗಿ ಕಂಪನಿಯೊಂದಕ್ಕೆ ಸೇರಿದ ಕಟ್ಟಡವೊಂದರ ತೆರವು ಕಾರ್ಯ ನಡೆಯುತ್ತಿತ್ತು. ಇಲ್ಲಿ ಕೆಲಸ ಮಾಡುತ್ತಿದ್ದ ಅರ್ಮಾನ್, ಝೈನುದ್ದೀನ್ ಸಹಿತ ಐವರು ಕಾರ್ಮಿಕರು ಕಳೆದ ರಾತ್ರಿ ಮಳೆ ಬಂದ ಕಾರಣ ಕಟ್ಟಡದ ಕೆಳಗಿನ ಕೋಣೆಯಲ್ಲಿ ಮಲಗಿದ್ದರೆನ್ನಲಾಗಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಕಟ್ಟಡದ ಮೇಲ್ಛಾವಣಿ ಏಕಾಏಕಿ ಕುಸಿದು ಇವರ ಮೇಲೆ ಬಿದ್ದಿದೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೂವರು ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಫಾತಿಮಾ ರಲಿಯಾರಿಗೆ 2022ನೇ ಸಾಲಿನ 'ಛಂದ ಪುಸ್ತಕ' ಬಹುಮಾನ