ಶುಶೃತಿ ಬ್ಯಾಂಕ್ ನಿರ್ದೇಶಕರ ಮನೆ ಮೇಲೆ ಸಿಸಿಬಿ ದಾಳಿ

Update: 2022-10-12 13:23 GMT

ಬೆಂಗಳೂರು, ಅ.12: ಅಧಿಕ ಬಡ್ಡಿಯ ಆಮಿಷವೊಡ್ಡಿ ಗ್ರಾಹಕರಿಗೆ ವಂಚಿಸಿರುವ ವಿಲ್ಸನ್ ಗಾರ್ಡನ್‍ನ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಹಲವು ಪ್ರಕರಣಗಳು ದಾಖಲಾದ ಬೆನ್ನಲ್ಲೇ ಬ್ಯಾಂಕಿನ ನಿರ್ದೇಶಕ, ಕೇಂದ್ರ ಕಚೇರಿ ಹಾಗೂ ವಿವಿಧ ಶಾಖೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದರು.

ಬುಧವಾರ ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಚಾಲ ಸೇರಿದಂತೆ 14 ಕಡೆಗಳಲ್ಲಿ ಏಕಕಾಲದಲ್ಲಿ ಸಿಸಿಬಿ ದಾಳಿ ಮಾಡಿ, ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1998ರಲ್ಲೇ ಸ್ಥಾಪನೆಯಾಗಿದ್ದ ಶುಶೃತಿ ಬ್ಯಾಂಕ್‍ಗೆ ಅಧ್ಯಕ್ಷನಾಗಿದ್ದ, ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ಆಡಳಿತ ಮಂಡಳಿಯು ಹೆಚ್ಚಿನ ಹಣ ಹೂಡಿದರೆ ಶೇ.8 ರಿಂದ 10 ರಷ್ಟು ಬಡ್ಡಿ ಹಣ ಕೊಡುವುದಾಗಿ ನಂಬಿಸಿ ಹೂಡಿಕೆ ಮಾಡಿಸಿಕೊಂಡಿತ್ತು. ನಂತರ ಕಾಲಕ್ರಮೇಣ ಹೂಡಿಕೆ ಹಣ ನೀಡದೆ ವಂಚಿಸುತಿತ್ತು ಎನ್ನಲಾಗಿದೆ.

ಪರಿಚಯಸ್ಥರಿಂದ ಯಾವುದೇ ದಾಖಲಾತಿ ಪಡೆದುಕೊಳ್ಳದೇ ಲಕ್ಷಾಂತರ ರೂಪಾಯಿ ಸಾಲ ನೀಡುತ್ತಿದ್ದ ಬ್ಯಾಂಕ್, ಈವರೆಗೂ ಅಸಲು ಹಾಗೂ ಬಡ್ಡಿ ಹಣ ಕಟ್ಟಿರಲಿಲ್ಲ. ಸುಮಾರು 100 ಕೋಟಿ ಅಧಿಕ ಹಣ ವಂಚಿಸಿರುವುದು ತಿಳಿದುಬಂದಿದೆ.

ಶುಶೃತಿ ಬ್ಯಾಂಕಿನ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಈ ಎಲ್ಲ ವಂಚನೆಗೂ ರೂವಾರಿ ಎನ್ನಲಾಗಿದೆ. ಇನ್ನೂ, ತನಗೆ ಪರಿಚಿತವಾದ ವ್ಯಕ್ತಿಗಳಾದ ವೇಣು, ಸುರೇಶ, ಮಂಜುನಾಥ್ ಸೇರಿದಂತೆ ಒಟ್ಟು 11 ಮಂದಿಗೆ ಒಟ್ಟು 100 ಕೋಟಿಯಷ್ಟು ಸಾಲವನ್ನು ಮಂಜೂರು ಮಾಡಿದ್ದ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News