×
Ad

ಹೈದರಾಬಾದ್: 903 ಕೋ.ರೂ.ಆನ್‌ಲೈನ್‌ ಹೂಡಿಕೆ ವಂಚನೆ, 10 ಜನರ ಬಂಧನ

Update: 2022-10-13 21:46 IST

ಹೈದರಾಬಾದ್,ಅ.13: 903 ಕೋ.ರೂ.ಗಳ ಆನ್ಲೈನ್ ವಂಚನೆಗೆ ಸಂಬಂಧಿಸಿದಂತೆ ಓರ್ವ ಚೀನಿ ಮತ್ತು ಓರ್ವ ತೈವಾನ್ ಪ್ರಜೆ ಸೇರಿದಂತೆ 10 ಜನರನ್ನು ಹೈದರಾಬಾದ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.

 ಜಾಲವು ಆನ್ಲೈನ್ ಹೂಡಿಕೆ ಆ್ಯಪ್ಗಳ ಮೂಲಕ ಕಾನೂನುಬಾಹಿರವಾಗಿ ಸಂಗ್ರಹಿಸಿದ ಹಣವನ್ನು ಅಮೆರಿಕದ ಡಾಲರ್ಗಳನ್ನಾಗಿ ಪರಿವರ್ತಿಸಲು ಮನಿ ಎಕ್ಸ್ಚೇಂಜ್ ಮತ್ತು ವಿದೇಶಿ ವಿನಿಮಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿತ್ತು. ಹೀಗೆ ಪರಿವರ್ತನೆಗೊಂಡ ಹಣವನ್ನು ಹವಾಲಾ ಕಾರ್ಯಾಚರಣೆಗಳ ಮೂಲಕ ವಿದೇಶಗಳಿಗೆ ರವಾನಿಸಲಾಗುತ್ತಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

‘ಲೋಕ್ಸಾಂ’ಎಂಬ ಹೂಡಿಕೆ ಆ್ಯಪ್ನಲ್ಲಿ ತಾನು 1.6 ಲ.ರೂ.ಗಳನ್ನು ತೊಡಗಿಸಿದ್ದು,ತನ್ನನ್ನು ವಂಚಿಸಲಾಗಿದೆ ಎಂದು ಆರೋಪಿಸಿ ಹೈದರಾಬಾದ್ ನಿವಾಸಿಯೋರ್ವ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಪೊಲೀಸರು ಈ ಬಂಧನಗಳನ್ನು ನಡೆಸಿದ್ದಾರೆ.

ದೂರುದಾರನ ಹಣವನ್ನು ಇಂಡಸ್ಇಂಡ್ ಬ್ಯಾಂಕಿನಲ್ಲಿಯ ಶಿಂಡೈ ಟೆಕ್ನಾಲಜೀಸ್ ಪ್ರೈ.ಲಿ.ಹೆಸರಿನ ಖಾತೆಯಲ್ಲಿ ಜಮೆ ಮಾಡಲಾಗಿತ್ತು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪುಣೆಯಲ್ಲಿ ಬಂಧಿಸಲ್ಪಟ್ಟಿರುವ ವೀರೇಂದ್ರ ಸಿಂಗ್ ಎಂಬಾತ ಈ ಖಾತೆಯನ್ನು ತೆರದಿದ್ದ. ಜಾಕ್ ಹೆಸರಿನ ಚೀನಿ ಪ್ರಜೆಯ ಆದೇಶದಂತೆ ತಾನು ಖಾತೆಯನ್ನು ತೆರೆದಿದ್ದೆ ಎಂದು ಸಿಂಗ್ ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಸಿ.ವಿ.ಆನಂದ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಶಿಂಡೈನ ಖಾತೆಯು ಬೆಟೆಂಚ್ ನೆಟ್ವರ್ಕ್ಸ್ ಎಂಬ ಇನ್ನೊಂದು ಕಂಪನಿಯೊಂದಿಗೆ ಜೋಡಣೆಗೊಂಡಿತ್ತು. ಇಂತಹುದೇ 15 ಖಾತೆಗಳನ್ನು ದಿಲ್ಲಿಯ ನಿವಾಸಿ ಸಂಜಯ ಕುಮಾರ ಎಂಬಾತ ತೆರೆದಿದ್ದ. ಈ ಖಾತೆಗಳ ವಿವರಗಳನ್ನು ಬಂಧಿತ ತೈವಾನ್ ಪ್ರಜೆ ಚು ಚುನ್-ಯು ಜೊತೆಗೆ ಹಂಚಿಕೊಂಡಿದ್ದ ಆತ ಪ್ರತಿ ಖಾತೆಗೆ 1.20 ಲ.ರೂ.ಗಳ ಕಮಿಷನ್ ಪಡೆದುಕೊಂಡಿದ್ದ. ಶಿಂಡೈನಿಂದ 38 ವಿವಿಧ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿತ್ತು. ಅಂತಿಮವಾಗಿ ರಾಜನ್ ಮನಿ ಕಾರ್ಪ್ ಮತ್ತು ಕೆಡಿಎಸ್ ಫಾರೆಕ್ಸ್ ಪ್ರೈ.ಲಿ.ಮೂಲಕ ಅದನ್ನು ಡಾಲರ್ಗಳನ್ನಾಗಿ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸಲಾಗಿತ್ತು ಎಂದು ಆನಂದ ವಿವರಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 1.91 ಕೋ.ರೂ.ಗಳನ್ನು ಸ್ತಂಭನಗೊಳಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News