ಬೆಂಗಳೂರು | ಅತ್ತೆಯ ಕೊಲೆ ಆರೋಪ: ಸೊಸೆಯ ಬಂಧನ
Update: 2022-10-14 18:47 IST
ಬೆಂಗಳೂರು, ಅ.14: ಆಸ್ತಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಸೊಸೆ ತನ್ನ ಅತ್ತೆಯನ್ನೇ ಕೊಲೆಗೈದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಶ್ರೀರಾಂಪುರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸುಗುಣಾ ಬಂಧಿತ ಆರೋಪಿಯಾಗಿದ್ದು, ಈಕೆ ತನ್ನ ಅತ್ತೆ ರಾಣಿ (76) ಎಂಬಾಕೆಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಾಣಿ ಅವರು ಎಲ್ಲ ಆಸ್ತಿಯನ್ನೂ ತನ್ನ ಮೂವರು ಗಂಡು ಮಕ್ಕಳಿಗೆ ಹಂಚಿದ್ದರು. ಒಂದು ಮನೆಯಲ್ಲಿ ತಾನು ವಾಸಿಸುತ್ತಿದ್ದರು. ಆ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಎರಡನೆ ಪುತ್ರನ ಪತ್ನಿ ಸುಗುಣಾ ಬೇಡಿಕೆಯಿಟ್ಟಿದ್ದಾರೆ. ಆದರೆ, ಇದಕ್ಕೆ ನಿರಾಕರಿಸಿದ್ದರಿಂದ ಸುಗುಣಾ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.