ಬೆಂಗಳೂರಿನಲ್ಲೊಂದು ಇಡ್ಲಿ, ಚಟ್ನಿ ನೀಡುವ ATM: ಸಾಮಾಜಿಕ ತಾಣದಲ್ಲಿ ವೀಡಿಯೊ ವೈರಲ್
ಬೆಂಗಳೂರು: ಖಾಸಗಿ ಕಂಪೆನಿಯೊಂದು ಆವಿಷ್ಕರಿಸಿದ ಇಡ್ಲಿ ವೆಂಡಿಂಗ್ ಮೆಶೀನಿನ (Idli Vending Machin) ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ವೀಡಿಯೊವನ್ನು ಟ್ವಿಟರ್ ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, 'ಬೆಂಗಳೂರಿನಲ್ಲಿ ಇಡ್ಲಿ ಎಟಿಎಂ' ಎಂದು ಬರೆದುಕೊಂಡಿದ್ದಾರೆ.
ವೀಡಿಯೊದಲ್ಲಿ, ಬ್ಲಾಗರ್ ಒಬ್ಬರು ಬೆಂಗಳೂರಿನ ರೆಸ್ಟೋರೆಂಟ್‌ನಲ್ಲಿ ತಾಜಾ ಮತ್ತು ಬಿಸಿ ಇಡ್ಲಿಗಳನ್ನು ಯಂತ್ರದ ಮೂಲಕ ಹೇಗೆ ನೀಡುತ್ತಿದೆ ಎಂಬುದನ್ನು ವಿವರಿಸಿದ್ದಾರೆ. ಮೊಬೈಲ್ನಲ್ಲಿ ಮೆನು ಸೆಲೆಕ್ಟ್ ಮಾಡಿಕೊಂಡು ಮಶೀನಿಗೆ ಸ್ವೈಪ್ ಮಾಡಿದರೆ ಕೆಲ ನಿಮಿಷಗಳಲ್ಲಿಯೇ ಈ ಮಶೀನ್ನಿಂದ ಬಿಸಿಬಿಸಿ ಇಡ್ಲಿ ಮತ್ತು ಚಟ್ನಿಯ ಪೊಟ್ಟಣ ಕೈಗೆ ಬರುತ್ತದೆ.
ಈ ವಿಡಿಯೋ ನೆಟ್ಟಿಗರನ್ನು ಬಹುವಾಗಿ ಆಕರ್ಷಿಸಿದೆ ಮತ್ತು ಹಲವಾರು ಮಂದಿ ಪ್ರತಿಕ್ರಿಯಿಸಿದ್ದಾರೆ.
'ಸಾರ್ವಜನಿಕ ಸ್ಥಳಗಳಲ್ಲಿ ಇಂಥ ಮೆಶೀನುಗಳನ್ನು ಸ್ಥಾಪಿಸಿ, ಬಹಳಷ್ಟು ಜನಕ್ಕೆ ಆಹಾರದ ಅವಶ್ಯಕತೆ ಇದೆ. ಅವರೆಲ್ಲ ಉಚಿತವಾಗಿ ತಿಂಡಿ ಪಡೆಯಲಿ' ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.
Idli ATM in Bangalore... pic.twitter.com/NvI7GuZP6Y
— B Padmanaban (padmanaban@fortuneinvestment.in) (@padhucfp) October 13, 2022