ಪ್ರಯಾಣಿಕರಿಗೆ ವಂಚನೆ ಆರೋಪ: ಖಾಸಗಿ ಬಸ್ ಏಜೆಂಟ್ ಸೆರೆ
Update: 2022-10-14 21:48 IST
ಬೆಂಗಳೂರು, ಅ.14: ಹೊರ ರಾಜ್ಯದ ಪ್ರಯಾಣಿಕರಿಗೆ ವಂಚಿಸುತ್ತಿದ್ದ ಆರೋಪದಡಿ ಖಾಸಗಿ ಬಸ್ ಏಜೆಂಟ್‍ನೋರ್ವನನ್ನು ಹಿಡಿದಿರುವ ಕೆಎಸ್ಸಾರ್ಟಿಸಿ ಜಾಗೃತ ಸಿಬ್ಬಂದಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಳಕಿಗೆ ಬಂದಿದೆ.
ಅ.2ರಂದು ಮೆಜೆಸ್ಟಿಕ್ ಬಳಿ ಹೊರ ರಾಜ್ಯದ ಇಬ್ಬರು ಪ್ರಯಾಣಿಕರಿಗೆ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸಲು 3 ಸಾವಿರ ರೂ. ಪಡೆದು ತಲಾ 396 ರೂ. ಟಿಕೆಟ್ ನೀಡಿ ವಂಚನೆ ಮಾಡಿರುವ ದೂರು ಬಂದ ಹಿನ್ನೆಲೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿರುವ ಕೆಎಸ್ಸಾರ್ಟಿಸಿ ಜಾಗೃತ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಖಾಸಗಿ ಏಜೆಂಟ್ ಗಂಗರಾಜು ಎಂಬುವವರು ವಶಕ್ಕೆ ಪಡೆದಿದ್ದಾರೆ.
ಆನಂತರ, ಇಲ್ಲಿನ ಉಪ್ಪಾರಪೇಟೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.