ಯೂನಿಯನ್ ಬ್ಯಾಂಕ್ ವತಿಯಿಂದ ರಸಪ್ರಶ್ನೆ ಸ್ಪರ್ಧೆ

Update: 2022-10-14 18:15 GMT

ಬೆಂಗಳೂರು, ಅ.14: ರಾಷ್ಟ್ರ ನಿರ್ಮಾಣ ಹಾಗೂ ಯುವ ಸಬಲೀಕರಣದ ಧ್ಯೇಯದೊಂದಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ‘ರಾಷ್ಟ್ರೀಯ ಸಾಮಾನ್ಯ ಜಾಗೃತಿ ರಸಪ್ರಶ್ನೆ ಸ್ಪರ್ಧೆ-2022’ ಅನ್ನು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ಬೆಂಗಳೂರಿನ 140 ಶಾಲೆಗಳಿಂದ 246 ತಂಡಗಳಲ್ಲಿ 492 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ಹಂತಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಒಟ್ಟು 6 ತಮಡಗಳು ಅಂತಿಮ ಹಂತ ಪ್ರವೇಶಿಸುವ ಅರ್ಹತೆಯನ್ನು ಪಡೆದುಕೊಂಡಿವೆ.

ಮುಖ್ಯ ಅತಿಥಿಯಾಗಿ ಐಎಎಸ್ ಅಧಿಕಾರಿ ನವೀನ್ ಭಟ್, ಫೀಲ್ಡ್ ಜನರಲ್ ಮ್ಯಾನೇಜರ್ ಅಲೋಕ್ ಕುಮಾರ್, ಉಪ ವಲಯ ಮುಖ್ಯಸ್ಥ ಸುನಿಲ್ ಕುಮಾರ್ ಯಾದವ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News