×
Ad

ಮಂಗಳೂರು ಜಂಕ್ಷನ್- ಉಡ್ನಾ ಜಂಕ್ಷನ್ ನಡುವೆ ಸಾಪ್ತಾಹಿಕ ವಿಶೇಷ ರೈಲು

Update: 2022-10-14 23:56 IST

ಉಡುಪಿ, ಅ.14: ದೀಪಾವಳಿ ಹಬ್ಬದ ನೂಕುನುಗ್ಗಲನ್ನು ಕಡಿಮೆ ಮಾಡಲು ಕೊಂಕಣ ರೈಲ್ವೆಯು ಪಶ್ಚಿಮ ರೈಲ್ವೆಯ ಸಹಯೋಗದೊಂದಿಗೆ ಮಹಾರಾಷ್ಟ್ರದ ಉಡ್ನಾ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ಸಾಪ್ತಾಹಿಕ ವಿಶೇಷ ರೈಲನ್ನು ವಿಶೇಷ ದರದೊಂದಿಗೆ ಓಡಿಸಲಿದೆ.

ರೈಲು ನಂ.09057 ಉಡ್ನಾ ಜಂಕ್ಷನ್-ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ವಿಶೇಷ ದರದ ವಿಶೇಷ ಸಾಪ್ತಾಹಿಕ ರೈಲು ಅ.23 ಹಾಗೂ 30ರಂದು ರವಿವಾರ ರಾತ್ರಿ 8:00ಗಂಟೆಗೆ ಉಡ್ನಾ ಜಂಕ್ಷನ್‌ನಿಂದ ಹೊರಡಲಿದ್ದು, ಮರುದಿನ ಸಂಜೆ 6:30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.

ರೈಲು ನಂ.09058 ಮಂಗಳೂರು ಜಂಕ್ಷನ್- ಉಡ್ನಾ ಜಂಕ್ಷನ್ ನಡುವೆ ಸಂಚರಿಸುವ ವಿಶೇಷ ದರದ ವಿಶೇಷ ಸಾಪ್ತಾಹಿಕ ರೈಲು ಅ.24 ಹಾಗೂ 31ರ ರಾತ್ರಿ 8:45ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದ್ದು ಮರುದಿನ ಸಂಜೆ 7:15ಕ್ಕೆ ಉಡ್ನಾ ಜಂಕ್ಷನ್ ತಲುಪಲಿದೆ.

ಈ ರೈಲು 24 ಬೋಗಿಗಳನ್ನು ಹೊಂದಿರುತ್ತದೆ. ಇದಕ್ಕೆ ವಲ್ಸಾಡು, ವಾಪಿ, ವಾಸೈ ರೋಡ್, ಪನ್ವೇಲ್, ರೋಹಾ, ಖೇಡ್, ಚಿಫ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕವಲ್ಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ತೀವಿಂ, ಕರ್ವಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ ರೋಡ್, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಾಡ್ ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News