×
Ad

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು: ತಹಶೀಲ್ದಾರ್ ಪ್ರದೀಪ್

ಕುಕ್ಕುಂದೂರು: 'ಕೆಎಂಇಎಸ್ ವಿದ್ಯಾ ಸಂಸ್ಥೆಯ 42ನೇ ವಾರ್ಷಿಕೋತ್ಸವ

Update: 2025-12-15 11:40 IST

ಕಾರ್ಕಳ: ಕರಾವಳಿಯ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಹೆಚ್ಚಿನ ಗಮನಹರಿಸಬೇಕು. ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರಿಗಳಾಗಬೇಕು ಎಂದು ಕಾರ್ಕಳದ ತಹಶೀಲ್ದಾರ್ ಪ್ರದೀಪ್ ಆರ್. ಕಿವಿಮಾತು ಹೇಳಿದ್ದಾರೆ.

ಅವರು ಕುಕ್ಕುಂದೂರು 'ಕೆಎಂಇಎಸ್ ವಿದ್ಯಾ ಸಂಸ್ಥೆಯ 42ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಕಳ ಜ್ಞಾನಸುಧಾ ಕಾಲೇಜಿನ ಪಿಆರ್ಓ ಜ್ಯೋತಿ ಪದ್ಮನಾಭ ಭಂಡಿ ಮಾತನಾಡಿ, 'ಕೆಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ತಾನು ಸೇವೆ ಸಲ್ಲಿಸಿದ ಕ್ಷಣಗಳನ್ನು ಸ್ಮರಿಸಿದರು.

ಸ್ಥಳೀಯ ಶಿರ್ಡಿ ಸಾಯಿಬಾಬಾ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ 'ಕೆಎಂಇಎಸ್ ಹಳೇ ವಿದ್ಯಾರ್ಥಿ ಆಶೀಶ್ ಶೆಟ್ಟಿ ಮಾತನಾಡಿ ತನ್ನ ವೈಯಕ್ತಿಕ ಬೆಳವಣಿಗೆಯಲ್ಲಿ ಕೆ.ಎಮ್.ಇ.ಎಸ್ ವಿದ್ಯಾ ಸಂಸ್ಥೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದನ್ನು ವಿವರಿಸಿದರು.

ಮತ್ತೋರ್ವ ಮುಖ್ಯ ಅತಿಥಿ ಮತ್ತು ಸಂಸ್ಥೆಯ ಹಳೇ ವಿದ್ಯಾರ್ಥಿನಿ ಡಾ.ಆಶಿತಾ ಕೃಷ್ಣ ಮಾತನಾಡಿ ಶುಭ ಹಾರೈಸಿದರು.

ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಇಮ್ತಿಯಾಝ್ ಅಹ್ಮದ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕೆ.ಬಾಲಕೃಷ್ಣ ರಾವ್ ವರದಿ ವಾಚಿಸಿದರು.

ಇದೇವೇಳೆ ಅಂತಾರಾಷ್ಟ್ರ ಮಟ್ಟದ ಟೆಕ್ವಾಂಡೊ ಕ್ರೀಡಾ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿರುವ ವಿದ್ಯಾರ್ಥಿ ಸನ್ಪಿತ್ ಶೆಟ್ಟಿಯವರನ್ನು ಸಂಸ್ಥೆಯ ವತಿಯಿಂದಿ ಸನ್ಮಾನಿಸಲಾಯಿತು.

ಮಾತ್ರವಲ್ಲದೆ ಸಂಸ್ಥೆಯಲ್ಲಿ ಇಪ್ಪತ್ತೈದು ವರ್ಷ ಸೇವೆಗೈದ ಶಿಕ್ಷಕಿ ಹೀಲ್ಡಾ ಡಿ' ಸೋಜ, ಕಾಲೇಜಿನ ಪರಿಚಾರಿಕೆ ಲೀಲಾವತಿ ಮೊದಲಾದವರನ್ನು ಸನ್ಮಾನಿಸಲಾಯಿತು.

ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸ್ವಾಗತಿಸಿದರು. ಶಿಕ್ಷಕಿ ನಳಿನಿ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಮುಹಮ್ಮದ್ ನವಾಲ್ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News