ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಅಬ್ದುಲ್ ಅಝೀಂ ಮುಂದುವರಿಕೆ
Update: 2022-10-15 19:30 IST
ಬೆಂಗಳೂರು, ಅ.15: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಅಬ್ದುಲ್ ಅಝೀಂ ಅವರನ್ನು ಮರು ನಾಮನಿರ್ದೇಶನಗೊಳಿಸಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಅಬ್ದುಲ್ ಅಝೀಂ ಅವರನ್ನು ಈ ಹಿಂದೆ 2019ರ ಅ.15ರಂದು ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನಗೊಳಿಸಲಾಗಿತ್ತು. ಅವರ ಕಾರ್ಯಾವಧಿಯು ಇದೇ ಅ.14ರಂದು(ಶುಕ್ರವಾರ) ಅಂತ್ಯಗೊಂಡಿದ್ದರಿಂದ ಅವರನ್ನು ಮರು ನಾಮನಿರ್ದೇಶನಗೊಳಿಸಿ ಆದೇಶಿಸಲಾಗಿದೆ.