×
Ad

ಕಾಶೀ ಮಠಾಧೀಶರ ದಿಗ್ವಿಜಯ ಮಹೋತ್ಸವ: ಗಜ ಪಡೆ ಆಕರ್ಷಣೆ

Update: 2022-10-15 22:42 IST

ಮಂಗಳೂರು, ಅ.15: ನಗರದ ವೆಂಕಟ್ರಮಣ ದೇವಸ್ಥಾನದಲ್ಲಿ  ಚಾತುರ್ಮಾಸ ವೃತದಲ್ಲಿರುವ ಕಾಶೀಮಠ ಸಂಸ್ಥಾನದ ಮಠಾಧೀಶರಾದ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವ ಕಾರ್ಯಕ್ರಮಕ್ಕೆ ಗಜ ಪಡೆ ಪ್ರಮುಖ ಆಕರ್ಷಣೆಯಾಗಿದೆ.

ರಥಬೀದಿ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಚಾತುರ್ಮಾಸ್ಯ ಮೆರವಣಿಗೆ ಆರಂಭಗೊಂಡು ಮಹಾಮ್ಮಾಯ ದೇವಸ್ಥಾನ ರಸ್ತೆ , ಗದ್ದೆಕೇರಿ, ಮಂಜೇಶ್ವರ ಗೋವಿಂದ ಪೈವೃತತಿ, ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರ ಜಂಕ್ಷನ್, ಬಸವನಗುಡಿ ರಸ್ತೆ, ಚಮ್ಮಾರಗಲ್ಲಿ, ಕೆಳರಥಬೀದಿ, ರಥಬೀದಿಯಾಗಿ ವೆಂಕಟ್ರಮಣ ದೇವಸ್ಥಾನದ ಬಳಿ ಸಾಗಲಿದೆ. ವೈಭವದ ಮೆರವಣಿಗೆಗೆ ಗಜಪಡೆ, ಅಶ್ವಪಡೆ, ಸ್ಯಾಕ್ಸೋಪೋನ್ ತಂಡ, ಪಂಚ ವಾದ್ಯ, ಚೆಂಡೆವಾದನ, ಆಕರ್ಷಕ ನ್ಯಾಸಿಕ್ ಬ್ಯಾಂಡ್ ತಂಡ, ತಾಲೀಮು, ಹುಲಿವೇಷ, ತಂಡಗಳು, ಸ್ತಬ್ಧಚಿತ್ರಗಳು ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ಮೆರುಗು ನೀಡಿವೆ.

ದೀಪಾಲಂಕಾರದ ಸೊಬಗು: ಮೆರವಣಿಗೆ ಸಾಗುವ ಹಾದಿಯಲ್ಲಿ ಬರುವ ಮನೆಯವರು ದೀಪ, ತೋರಣಗಳಿಂದ ಬೀದಿಯನ್ನು ಅಲಂಕರಿಸಲಾಗಿದೆ.  ಮೆರವಣಿಗೆ ಸಾಗುವ ಹಾದಿಯಲ್ಲಿ ಸಮಾಜ ಬಂಧುಗಳು ಗುರುಗಳಿಂದ ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು.

ಈ ಸಂದರ್ಭದಲ್ಲಿ  ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ , ಚಾತುರ್ಮಾಸ ಸಮಿತಿಯ ಅಧ್ಯಕ್ಷ ಮುಂಡ್ಕುರ್ ರಾಮದಾಸ್ ಕಾಮತ್ , ಪದ್ಮನಾಭ ಪೈ , ಸಿ . ಎಲ್ಜ ಶೆಣೈ , ಜಯರಾಜ್  ಪೈ , ಪ್ರಶಾಂತ್ ರಾವ್ , ಡಾ . ಉಮಾನಂದ ಮಲ್ಯ , ನಾ ಮದೇವ್ ಮಲ್ಯ , ಸುರೇಶ್ ವಿ ಕಾಮತ್, ಗಣಪತಿ ಪೈ , ಗುರುದತ್ ಕಾಮತ್ , ಬಿ.ಆರ್. ಭಟ್ , ಮಾರೂರ್ ಶಶಿಧರ್ ಪೈ ,  ಶಾಸಕ ಡಿ . ವೇದವ್ಯಾಸ ಕಾಮತ್, ಕೊಚ್ಚಿನ್ ತಿರುಮಲ ದೇವಳದ ಜಗನ್ನಾಥ್ ಶೆಣೈ , ಜಿ ಎಸ್ ಬಿ ಸೇವಾಮಂಡಲದ ಆರ್.ಜಿ.ಭಟ್, ರಘುವೀರ್ ಭಂಡಾರ್ಕರ್ , ದಿನೇಶ್ ಕಾಮತ್ ಕೋಟೇಶ್ವರ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News