ಮಳಲಿ ಮಸೀದಿ ಪ್ರಕರಣ: ನ. 9ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ

Update: 2022-10-17 08:16 GMT

ಬಜ್ಪೆ: ಮಳಲಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ನ.9ಕ್ಕೆ ಆದೇಶ ನೀಡುವುದಾಗಿ ತಿಳಿಸಿದೆ‌.

ಸದ್ಯ ಮಸೀದಿ‌ಯ ಕಟ್ಟಡವನ್ನು ಯಥಾ ಸ್ಥಿತಿಯಲ್ಲಿಯೇ ಇಡುವಂತೆ ನ್ಯಾಯಾಲಯ ಸೂಚಿಸಿದೆ.

ಮಸೀದಿಯ ನವೀಕರಣದ ಸಂದರ್ಭ ಮಸೀದಿಯಲ್ಲಿ ದೇವಸ್ಥಾನದ‌ ಮಾದರಿ ಕಂಡು ಬಂದಿದೆ ಎಂದು ಆರೋಪಿಸಿ ಸ್ಥಳೀಯರಾದ ಧನಂಜಯ ಮತ್ತಿತರ ಐವರು ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಸಂಬಂಧ ವಾದ ಮಂಡಿಸಿದ್ದ ಮಸೀದಿಯ ಪರ ವಕೀಲರು ಮಸೀದಿಯು ವಕ್ಫ್‌ ಆಸ್ತಿಯಾಗಿರುವುದರಿಂದ ಈ‌ ಪ್ರಕರಣವನ್ನು ವಿಚಾರಣೆ‌ ನಡೆಸಲು ಸಿವಿಲ್‌ ನ್ಯಾಯಾಲಯಕ್ಕೆ ಅವಕಾಶವಿಲ್ಲ. ವಕ್ಫ್‌ಗೆ ಸಂಬಂಧಿಸಿದ ವಿಶೇಷ ನ್ಯಾಯಾಲಯವಿರುವುದರಿಂದ  ಈ ಪ್ರಕರಣವನ್ನು ವಜಾಗೊಳಿಸುವಂತೆ ಮನವಿ‌ ಮಾಡಿದ್ದರು.

ಪ್ರಕರಣದ ಕುರಿತು ವಾದ ಪ್ರತಿವಾದಗಳನ್ನು ಆಲಿಸಿದ್ದ ಮಂಗಳೂರು ಮೂರನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯವು ಇಂದು ತೀರ್ಪು ನೀಡುವುದಾಗಿ ಹೇಳಿತ್ತು. ಅದರಂತೆ ಇಂದು ನ್ಯಾಯಾಲಯವು ಪ್ರಕರಣ‌ಕ್ಕೆ ಸಂಬಂಧಿತ ತೀರ್ಪನ್ನು ನ.9ರಂದು ಪ್ರಕಟಿಸುವುದಾಗಿ ಹೇಳಿ ತೀರ್ಪನ್ನು ಮುಂದೂಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News