ಅಲ್ ಅಝ್ಹರಿಯ್ಯ ಅಸೋಸಿಯೇಶನ್‌ನಿಂದ ಮೀಲಾದುನ್ನಬಿ
Update: 2022-10-17 19:29 IST
ಮಂಗಳೂರು, ಅ.17: ನಗರದ ಅಲ್‌ಅಝ್ಹರಿಯ್ಯ ಅಸೋಸಿಯೇಶನ್ ಮದ್ರಸ ವಿದ್ಯಾರ್ಥಿಗಳಿಂದ ಪ್ರವಾದಿ ಮುಹಮ್ಮದ್ (ಸ)ರವರ ಜನ್ಮದಿನದ ಪ್ರಯುಕ್ತ ಅಲ್‌ಅಝ್‌ಹರಿಯ್ಯ ಮದ್ರಸ ಸಭಾಂಗಣದಲ್ಲಿ ಮೀಲಾದುನ್ನಬಿ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಮಾತನಾಡಿದರು. ಅಝ್ಹರಿಯ್ಯ ಮುದರ್ರಿಸ್ ಹೈದರ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಸ್ವಾಗತಿಸಿದರು.
ಸಹ ಮುದರ್ರಿಸ್ ಹಾಫಿಲ್ ಅಬೂಬಕ್ಕರ್ ಮದನಿ, ಮದ್ರಸದ ಸದರ್ ಮುಅಲ್ಲಿಂ ಬಶೀರ್ ಮದನಿ, ಯಹ್ಯಾ ಮದನಿ, ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದಕ್, ರಿಯಾಝ್ ಬುರ್ಕಾ ಪ್ಯಾಲೆಸ್, ಆಡಳಿತ ಸಮಿತಿಯ ಸದಸ್ಯರಾದ ಫಝಲ್ ಹಾಜಿ, ರಿಯಾಝ್ ಹಾಝಿ ಕಚ್ಚ್‌ಮನೆ, ಅರ್ಶದ್ ಕಂದಕ್, ರಿಯಾಝುದ್ದೀನ್ ಹಾಜಿ, ಇಬ್ರಾಹೀಂ ಹಾಜಿ, ಮ್ಯಾನೇಜರ್ ಅಬ್ದುಲ್ ರಹ್ಮಾನ್ ಮತ್ತಿತರು ಉಪಸ್ಥಿತರಿದ್ದರು.