ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ನೂತನ ಸಮಿತಿಯ ಪದಗ್ರಹಣ
ಮಂಗಳೂರು, ಅ.17: ದೇಶದ ಸ್ವಾತಂತ್ರ್ಯದ ಪ್ರಪ್ರಥಮ ಮಹಿಳಾ ಹೋರಾಟಗಾರ್ತಿ ಉಳ್ಳಾಲ ರಾಣಿ ಅಬ್ಬಕ್ಕನ ಸಾರ್ಥಕ ಸ್ಮರಣೆಗಾಗಿ ಸಮರ್ಪಿತ ಸಂಸ್ಥೆಯಾದ ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಮಹಾಸಭೆಯಲ್ಲಿ ೨೦೨೨-೨೩ನೇ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಪ್ರಮಾಣ ವಚನವನ್ನು ನೆರವೇರಿಸಿದರು.
ಡಾ. ಹರಿಕೃಷ್ಣ ಪುನರೂರು (ಗೌರವಾಧ್ಯಕ್ಷರು), ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಅಧ್ಯಕ್ಷರು), ರವೀಂದ್ರ ಶೆಟ್ಟಿ ಉಳಿದೊಟ್ಟು (ಪ್ರಧಾನ ಸಂಚಾಲಕರು), ನಮಿತಾ ಶ್ಯಾಮ್, ವಾಮನ್ ಬಿ. ಮೈಂದನ್ (ಉಪಾಧ್ಯಕ್ಷರು), ತ್ಯಾಗಮ್ ಹರೇಕಳ (ಪ್ರಧಾನ ಕಾರ್ಯದರ್ಶಿ), ಪಿ.ಡಿ.ಶೆಟ್ಟಿ (ಕೋಶಾಧಿಕಾರಿ), ಸುಮಾ ಪ್ರಸಾದ್, ದೀಪಕ್‌ರಾಜ್ ಉಳ್ಳಾಲ್ (ಜೊತೆ ಕಾರ್ಯದರ್ಶಿಗಳು), ನಿರ್ಮಲ್ ಭಟ್ ಕೊಣಾಜೆ (ಜೊತೆ ಕೋಶಾಧಿಕಾರಿ), ವಿಜಯಲಕ್ಷ್ಮಿ ಬಿ. ಶೆಟ್ಟಿ (ಸಂಚಾಲಕರು), ಸುಹಾಸಿನಿ ಬಬ್ಬುಕಟ್ಟೆ (ಹಿರಿಯ ಸಲಹೆಗಾರರು), ಲಕ್ಷ್ಮಿನಾರಾಯಣ ರೈ ಹರೇಕಳ, ಸತೀಶ್ ಸುರತ್ಕಲ್ (ಸಾಂಸ್ಕೃತಿಕ ಕಾರ್ಯದರ್ಶಿಗಳು), ತೋನ್ಸೆ ಪುಷ್ಕಳ ಕುಮಾರ್, ವಿಜಯಲಕ್ಷ್ಮಿ ಕಟೀಲು (ಸಂಘಟನಾ ಕಾರ್ಯದರ್ಶಿಗಳು), ತುಕಾರಾಂ ಉಳ್ಳಾಲ್, ಲೋಕನಾಥ ರೈ (ಕ್ರೀಡಾ ಕಾರ್ಯದರ್ಶಿಗಳು), ಪ್ರಕಾಶ್ ಸಿಂಪೋನಿ, ಮೋಹನ್ ದಾಸ್ ರೈ, ಡಾ. ಅರುಣ್ ಉಳ್ಳಾಲ್ (ಯೋಜನಾ ನಿರ್ದೇಶಕರು).
ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಚಂದ್ರಹಾಸ ಅಡ್ಯಂತಾಯ, ಕೆ.ತಾರಾನಾಥ ರೈ, ಎಂ.ಸುಂದರ್ ಶೆಟ್ಟಿ, ಲೋಹಿತ್ ಕುಮಾರ್ ಪಜೀರು, ಬಾದಶಾ ಸಾಂಬಾರ್ ತೋಟ, ಗೀತಾ ಜುಡಿತ್ ಸಲ್ದಾನ್ಹ, ಪ್ರತಿಮಾ ಹೆಬ್ಬಾರ್, ವಿನುತಾ, ಸುಮತಿ ಹೆಗ್ಡೆ, ಆನಂದ ಶೆಟ್ಟಿ, ಪ್ರಭಾಕರ ರೈ, ಅರುಂಧತಿ, ಜಯಲಕ್ಷ್ಮಿ,ಎ.ಕೆ. ಬಾಬು, ವಸಂತ್ ರೈ ಪ್ರಮಾಣವಚನ ಸ್ವೀಕರಿಸಿದರು.