ಬೆಂಗಳೂರು | ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬೆಂಕಿ, ಕೆಲವು ದಾಖಲೆಗಳು ಭಸ್ಮ

Update: 2022-10-18 06:20 GMT

ಬೆಂಗಳೂರು, ಅ.18: ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ಹಲವು ದಾಖಲಾತಿಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದುಬಂದಿದೆ.

ಹಳೆಯ ದಾಖಲಾತಿಗಳಿದ್ದ ಕೊಠಡಿಯಲ್ಲಿ ಇಂದು ಮುಂಜಾನೆ ಬೆಳಗ್ಗೆ 5:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದವರು‌ ಬೆಂಕಿಯನ್ನು ಆರಿಸಿದ್ದಾರೆ. ಬೆಂಕಿಯಿಂದ ಕೆಲವು ಕಡತಗಳು ಹಾನಿಗೀಡಾಗಿವೆ ಎಂದು ತಿಳಿದುಬಂದಿದೆ.

ಠಾಣೆಯ ಬಲಭಾಗದಲ್ಲಿರುವ ಹಳೆಯ ಕಡತಗಳು, ಜಪ್ತಿಯಾದ ಕೆಲ ವಸ್ತುಗಳನ್ನ ಇರಿಸಿರುವ ಕೊಠಡಿಯಲ್ಲಿ ಇಂದು ಮುಂಜಾನೆ 5:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಅದೇ ಕೊಠಡಿಯಲ್ಲಿ ಯುಪಿಎಸ್ ಕೂಡಾ ಇತ್ತು. ಅಗ್ನಿಶಾಮಕದಳದವರು‌ ಬೆಂಕಿ ಆರಿಸಿದ್ದಾರೆ. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟಿನಿಂದ ಅವಘಡ ಸಂಭವಿಸಿದಂತಿದೆ. ಘಟನೆಯ ಕುರಿತು ವರದಿ ನೀಡುವಂತೆ ಎಸಿಪಿಯವರಿಗೆ ಸೂಚಿಸಿದ್ದೇನೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ: ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News