ಪೇ ಸಿಎಂ ಜತೆ ‘Saycm’ ಅಭಿಯಾನ: ಪ್ರಿಯಾಂಕ್ ಖರ್ಗೆ

Update: 2022-10-18 18:26 GMT

.@BJP4Karnataka is yet to answer the questions raised by @INCKarnataka & the common man about the unfulfilled promises made to the people.

Mr @BSBommai, people are now asking #SayCM#NimHatraIdyaUttara pic.twitter.com/MLk34C51p5

— Siddaramaiah (@siddaramaiah) October 18, 2022

ಬೆಂಗಳೂರು, ಅ.18:ಬಿಜೆಪಿ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಎಷ್ಟೊಂದು ಭರವಸೆ ಈಡೇರಿಸಿದೆ ಎಂದು ಪ್ರಶ್ನಿಸಲು ಪೇ ಸಿಎಂ ಜೊತೆಗೆ ‘ಸೇ-ಸಿಎಂ’ (ಹೇಳಿ ಸಿಎಂ) ಅಭಿಯಾನ ನಡೆಸಲಾಗುವುದು ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ 600ಕ್ಕೂ ಹೆಚ್ಚು ಭರವಸೆ ನೀಡಿದ್ದು, ಶೇ.10ರಷ್ಟು ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷ ಅಭಿಯಾನದ ಮೂಲಕ ಪ್ರಶ್ನೆ ಕೇಳುತ್ತಿದ್ದು, ಇಲ್ಲಿಯವರೆಗೂ ಸರಕಾರದಿಂದ ಯಾವುದೇ ಉತ್ತರ ಸಿಕ್ಕಿಲ್ಲ ಎಂದರು.

ಅಲ್ಲದೆ, ಪೇಸಿಎಂ ಅಭಿಯಾನದ ಜತೆಗೆ ನಾವು ಸೇ-ಸಿಎಂ ಅಭಿಯಾನ ನಡೆಸಲಾಗುತ್ತಿದೆ. ಇನ್ನೂ, ರಾಜ್ಯ ಸರಕಾರ ಮೂಕ ಬಸವನ ರೀತಿ ಕೂತರೆ ಆಗುವುದಿಲ್ಲ. ನೀವು ಈ ಪ್ರಣಾಳಿಕೆ ಮೂಲಕ ಜನರಿಂದ ಮತ ಹಾಕಿಸಿಕೊಂಡಿದ್ದೀರಿ. ಹೀಗಾಗಿ ನೀವು ಜನರಿಗೆ ಉತ್ತರಿಸಲೇ ಬೇಕು ಎಂದು ಅವರು ಹೇಳಿದರು.

ಪೇಸಿಎಂ ಅಭಿಯಾನದಲ್ಲಿ ಸಿಸಿಬಿ ನೊಟೀಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ದುರ್ದೈವ ಎಂದರೆ ಪೇಸಿಎಂ ಅಭಿಯಾನ ಮಾಡಿದ್ದು ಯಾರು? ಪೋಸ್ಟರ್ ಅಂಟಿಸಿದವರು ಯಾರು ಎಂದು ಗೊತ್ತಿದೆ. ಆದರೂ ಇದರ ತನಿಖೆಯನ್ನು ಸಿಸಿಬಿಗೆ ನೀಡಿದ್ದಾರೆ. ಆದರೆ ಪಿಎಸ್ಸೈ ಹಗರಣ, ಕೆಪಿಟಿಸಿಎಲ್, ಪಿಡಬ್ಲ್ಯೂಡಿ ಅಕ್ರಮ ತನಿಖೆ ಬಗ್ಗೆ ನ್ಯಾಯಾಂಗ ತನಿಖೆ ಮಾಡುತ್ತಿಲ್ಲ ಎಂದರು.

ಇನ್ನೂ, ಯುವಕರಿಗೆ ಶಿಕ್ಷಣ, ಉದ್ಯೋಗ ನೀಡುವ ಬದಲು ಅವರ ಹೆಗಲಿಗೆ ಕೇಸರಿ ಶಾಲು ಹಾಕಿ ಅವರಿಗೆ ಧರ್ಮ ರಕ್ಷಕ ಹಾಗೂ ಗೋರಕ್ಷಕ ಎಂಬ ಬಿರುದು ನೀಡುತ್ತಿದ್ದಾರೆ. ಕಾಂಗ್ರೆಸ್ ಆರಂಭದಿಂದಲೂ ಬಿಜೆಪಿ ಯುವಕರ ದಾರಿ ತಪ್ಪಿಸುತ್ತಿದೆ, ಭವಿಷ್ಯದ ಜತೆ ಚೆಲ್ಲಾಟವಾಡಿ, ಅವರ ಭವಿಷ್ಯ ನಾಶ ಮಾಡುತ್ತಿದೆ ಎಂದು ಅವರು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News