ಅಲ್-ಮದ್ರಸತುಲ್ ಅಝ್ಹರಿಯ್ಯದಲ್ಲಿ ಮೀಲಾದುನ್ನಬಿ ಕಾರ್ಯಕ್ರಮ
ಮಂಗಳೂರು : ನಗರದ ಬಂದರ್‌ನ ಅಲ್ ಮದ್ರಸತುಲ್ ಅಝ್ಹರಿಯ್ಯ ಬ್ರಾಂಚ್ ಮದ್ರಸ ವಿದ್ಯಾರ್ಥಿಗಳಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಪ್ರಯುಕ್ತ ಅಲ್‌ಅಝ್‌ಹರಿಯ್ಯ ಮದ್ರಸ ಸಭಾಂಗಣದಲ್ಲಿ ಮೆಹ್ಫಿಲೇ ಮದೀನಾ ಮೀಲಾದುನ್ನಬಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಸಂಸ್ಥೆಯ ಉಪಾಧ್ಯಕ್ಷ ಎಸ್‌ಎಂಆರ್ ರಶೀದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಸ್ವಾಗತಿಸಿದರು. ಮಂಗಳೂರು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು. ಬೂಬುಕಾ ಮಸೀದಿಯ ಖತೀಬ್ ಸಿರಾಜುದ್ದೀನ್ ಫೈಝಿ ದುಆಗೈದರು.
ಅಝ್ಹರಿಯ್ಯ ಮುದರ್ರಿಸ್ ಹೈದರ್ ಮದನಿ, ಸಹ-ಮುದರ್ರಿಸ್ ಹಾಫಿಳ್ ಅಬೂಬಕ್ಕರ್ ಮದನಿ, ಸದರ್ ಉಸ್ತಾದ್ ಬಶೀರ್ ಮದನಿ, ಯಹ್ಯಾ ಮದನಿ, ಕಾರ್ಪೊರೇಟರ್ ಅಬ್ದುಲ್ ಲತೀಫ್, ಸಂಸುದ್ದೀನ್ ಬಂದರ್ ಹಾಗೂ ಮಂಗಳೂರು ಸೋಶಿಯಲ್ ಸರ್ವಿಸ್ ಸೆಂಟರ್ ಅಧ್ಯಕ್ಷ ಕೆ.ಪಿ. ರಶೀದ್, ಉಪಾಧ್ಯಕ್ಷ ಸಲೀಮ್ ಸಫಾ, ಅಶ್ರಫ್ ಹಳೇಮನೆ, ಝಾಕಿರ್ ತೂಸಿಮನೆ, ಎಂಎಫ್‌ಬಿ ನಝೀರ್, ಮದ್ರಸ ಆಡಳಿತ ಸಮಿತಿತ ಸದಸ್ಯರಾದ ರಿಯಾಝ್ ಹಾಜಿ ಕಚ್ಚಿಮನೆ, ಅರ್ಶದ್ ಕಂದ್, ರಿಯಾಝುದ್ದೀನ್ ಹಾಜಿ, ಮ್ಯಾನೇಜರ್ ಅಬ್ದುಲ್ ರಹ್ಮಾನ್, ಮೊಯ್ದಿನ್ ಹಾಜಿ ಉಪಸ್ಥಿತರಿದ್ದರು.