×
Ad

ಬ್ಯಾರಿ ಸಾಹಿತ್ಯ ಸಮ್ಮೇಳನ: ಅವಲೋಕನಾ ಸಭೆ

Update: 2022-10-19 19:22 IST

ಮಂಗಳೂರು, ಅ.19: ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನಲ್ಲಿ ಜರಗಿದ ಉಳ್ಳಾಲ ತಾಲೂಕು ಎರಡನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಅವಲೋಕನಾ ಸಭೆಯು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ನಝೀರ್ ಉಳ್ಳಾಲ್‌ರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಪಾಲ್ಗೊಂಡ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕಾರ್ಯಕ್ರಮದ ಜನರಲ್ ಕನ್ವೀನರ್ ಮನ್ಸೂರ್ ಅಹ್ಮದ್ ಆಝಾದ್ ಲೆಕ್ಕಪತ್ರ ಮಂಡಿಸಿದರು.

ಈ ಸಂದರ್ಭ ಮೇಲ್ತೆನೆಯ ಅಧ್ಯಕ್ಷ ಮುಹಮ್ಮದ್ ಬಾಷಾ ನಾಟೆಕಲ್, ಪ್ರಧಾನ ಕಾರ್ಯದರ್ಶಿ ಬಶೀರ್ ಕಲ್ಕಟ್ಟ, ಕೋಶಾಧಿಕಾರಿ ಇಸ್ಮಾಯಿಲ್ ಟಿ, ಹಾಗೂ ಸಮ್ಮೇಳನದ ಪ್ರಚಾರ ಸಮಿತಿಯ ಸಂಚಾಲಕ ಮಂಗಳೂರ ರಿಯಾಝ್, ಸಹ ಸಂಚಾಲಕ ಸೋಶಿಯಲ್ ಫಾರೂಕ್, ಸ್ವಾಗತ ಸಮಿತಿಯ ಉಪಾಧ್ಯಕ್ಷ ಅಬ್ಬಾಸ್ ಉಚ್ಚಿಲ  ಅವರನ್ನು ಅಭಿನಂದಿಸಲಾಯಿತು.

ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ಅಲಿಕುಂಞ ಪಾರೆ, ಕಾರ್ಯಕ್ರಮದ ಸಂಚಾಲಕ ಹಂಝ ಮಲಾರ್, ಉಪಾಧ್ಯಕ್ಷ ಅಬ್ದುಲ್ ರಝಾಕ್ ಶಾಲಿಮಾರ್, ಇಬ್ರಾಹಿಂ ನಡುಪದವು, ಸುಲೈಮಾನ್ ಸಹಾರ, ಇಬ್ರಾಹಿಂಕುಂಞಿ ಪಾರೆ, ಸಿದ್ದೀಕ್ ಎಸ್. ರಾಝ್, ಆಸೀಫ್ ಬಬ್ಬುಕಟ್ಟೆ, ಬಿ.ಎಂ. ಕಿನ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News