ಪೊಲೀಸ್ ಸಿಬ್ಬಂದಿಗೆ ಕಿರುಕುಳ ಆರೋಪದ ಬೆನ್ನಲ್ಲೇ DCP ನಿಶಾ ಜೇಮ್ಸ್​​ ವರ್ಗಾವಣೆ

Update: 2022-10-20 08:01 GMT
ನಿಶಾ ಜೇಮ್ಸ್- 

ಬೆಂಗಳೂರು :  ಪೊಲೀಸ್ ಕಾನ್ಸ್​ಟೆಬಲ್​​​ಗಳಿಗೆ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಆರೋಪಗಳ ಸುರಿಮಳೆಯೇ ಗೈದಿರುವ ದೂರಿನ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ DCP ನಿಶಾ ಜೇಮ್ಸ್​​ ಅವರನ್ನು ವರ್ಗಾವಣೆ ಮಾಡಲಾಗಿದೆ.

ನಿಶಾ ಜೇಮ್ಸ್​ 2012ನೇ ಬ್ಯಾಚ್​ IPS ಅಧಿಕಾರಿಯಾಗಿದ್ದರು. ಕಳೆದ 3 ವರ್ಷದಿಂದ ಕಮಿಷನರ್​​ ಕಚೇರಿ ಆಡಳಿತ ವಿಭಾಗದ DCP ಆಗಿದ್ದರು. ಇದೀಗ ನಿಶಾ ಜೇಮ್ಸ್​ರನ್ನು ಆಂತರಿಕ ಭದ್ರತಾ ವಿಭಾಕ್ಕೆ SPಯಾಗಿ  ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಡಿಜಿಪಿ ಡಾ.ಎಂ.ಎ.ಸಲೀಂ  ವರ್ಗಾವಣೆ ಮಾಡಿ ಆದೇಶಿಸಿದ್ದಾರೆ. 

ಬೆಂಗಳೂರು ನಗರ ಪೊಲೀಸ್ ಆಡಳಿತ ವಿಭಾಗ ಡಿಸಿಪಿ ಯಾಗಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಅವರನ್ನು ನಿಯೋಜನೆ ಮಾಡಲಾಗಿದೆ. 

ಇದನ್ನೂ ಓದಿ: 'ಕನ್ನಡ ಮಾತನಾಡುವ ಸಿಬ್ಬಂದಿ ಟಾರ್ಗೆಟ್': ಡಿಸಿಪಿ ನಿಶಾ ಜೇಮ್ಸ್ ವಿರುದ್ಧ ಎಡಿಜಿಪಿಗೆ ನೀಡಿದ ದೂರಿನ ಪತ್ರ ವೈರಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News