×
Ad

ಬೆಂಗಳೂರು; ಅಪಾರ್ಟ್‍ಮೆಂಟ್ ಕಟ್ಟಡದ 9ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ

Update: 2022-10-20 20:37 IST

ಬೆಂಗಳೂರು, ಅ.20:  ಖಾಸಗಿ ಕಂಪೆನಿಯ ಮಹಿಳಾ ಉದ್ಯೋಗಿಯೊಬ್ಬರು ಅಪಾರ್ಟ್‍ಮೆಂಟ್ ಕಟ್ಟಡದ 9ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರ್ತೂರಿನಲ್ಲಿ ನಡೆದಿದೆ.

ದಿಶಾ ಅಪಾರ್ಟ್‍ಮೆಂಟ್‍ನ ನಿವಾಸಿ ಉಪಾಸನಾ ರಾವತ್ (30) ಆತ್ಮಹತ್ಯೆ ಮಾಡಿಕೊಂಡವರು. ಈ ಘಟನೆ ಸಂಬಂಧ ಮೃತಳ ಪತಿ ನಿಹಾರ್ ರಂಜನ್ ರಾವತ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಕೌಟುಂಬಿಕ ವಿಚಾರದಿಂದ ಜಗಳವಾಗಿ ಇದರಿಂದ ಬೇಸತ್ತು, ಅಪಾರ್ಟ್‍ಮೆಂಟ್ ಕಟ್ಟಡದ 9ನೆ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 9 ವರ್ಷಗಳ ಹಿಂದೆ ನಿಹಾರ್ ರಂಜನ್ ರಾವತ್ ಹಾಗೂ ಉಪಾಸನಾ ರಾವತ್ ವಿವಾಹವಾಗಿದ್ದು, ದಂಪತಿ ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿದ್ದರು. 

ಇಬ್ಬರು ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದರು. ಸಂತಾನ ಇಲ್ಲದ ಕಾರಣ ಇಬ್ಬರ ಮಧ್ಯೆ ಮನಸ್ತಾಪ ಬಂದಿದ್ದು, ವಿಚ್ಛೇದನ ಪಡೆಯಲು ಮುಂದಾಗಿದ್ದರು. ಈ ಹಿನ್ನೆಲೆ ಉಪಾಸನಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ವರ್ತೂರು ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News