×
Ad

ವೃಷಭಾವತಿ ವ್ಯಾಪ್ತಿಯಲ್ಲಿ 14 ಒತ್ತುವರಿ ತೆರವು: ಹೈಕೋರ್ಟ್ ಗೆ BBMP ಮಾಹಿತಿ

Update: 2022-10-20 23:14 IST

ಬೆಂಗಳೂರು, ಅ.20: ಬೆಂಗಳೂರಿನ ವೃಷಭಾವತಿ ಮತ್ತು ಅದರ ಉಪನದಿ ವ್ಯಾಪ್ತಿಯಲ್ಲಿನ ಒಟ್ಟು 14 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ ಎಂದು ಹೈಕೋರ್ಟ್‍ಗೆ ಬಿಬಿಎಂಪಿಯು ಗುರುವಾರ ಮಾಹಿತಿ ನೀಡಿದೆ.

ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.   

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಾಜಕಾಲುವೆ ಉಸ್ತುವಾರಿ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್, ರೂಪಿಸಿರುವ ಅನುಪಾಲನಾ ವರದಿಯನ್ನು ಫೋಟೊಗಳ ಸಹಿತ ದಾಖಲೆಗಳೊಂದಿಗೆ ಪೀಠಕ್ಕೆ ಬಿಬಿಎಂಪಿ ಪರ ವಕೀಲರು ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ಪೀಠವು ವಿಚಾರಣೆಯನ್ನು ಮೂರು ವಾರ ಕಾಲ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News