×
Ad

ಮಂಗಳೂರು: ಎಸ್‌ವೈಎಸ್-ಎಸ್ಸೆಸ್ಸೆಫ್‌ನಿಂದ ಮೀಲಾದ್ ರ‍್ಯಾಲಿ

Update: 2022-10-21 22:26 IST

ಮಂಗಳೂರು, ಅ.21: ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ದ.ಕ.ಜಿಲ್ಲಾ (ವೆಸ್ಟ್) ವತಿಯಿಂದ ‘ಭೀತಿಯ ಜಗತ್ತಿಗೆ ಪ್ರೀತಿಯ ಪ್ರವಾದಿ’ ಎಂಬ ಧ್ಯೇಯವಾಕ್ಯದೊಂದಿಗೆ ‘ಇಲಲ್ ಹಬೀಬ್-ಮೀಲಾದ್ ರ‍್ಯಾಲಿ’ಯು ಶುಕ್ರವಾರ ನಗರದ ಬಾವುಟಗುಡ್ಡದಿಂದ ಕ್ಲಾಕ್ ಟವರ್‌ವರೆಗೆ ನಡೆಯಿತು.

ಟೀಮ್ ಇಸಾಬಾ ವತಿಯಿಂದ ಆಕರ್ಷಕ ರ್ಯಾಲಿ, ದಫ್, ತಾಲೀಮು ಪ್ರದರ್ಶನವು ರ‍್ಯಾಲಿಯ ವಿಶೇಷ ಆಕರ್ಷಣೆಯಾಗಿತ್ತು. ಬಾವುಟಗುಡ್ಡದಿಂದ ಹೊರಟ ರ್ಯಾಲಿಗೆ ಸೈಯದ್ ಶಿಹಾಬುದ್ದೀನ್ ಮದಕ ತಂಙಳ್ ಚಾಲನೆ ನೀಡಿದರು. ಕ್ಲಾಕ್‌ಟವರ್ ಬಳಿ ನಡೆದ ಸಮಾರೋಪ ಕಾರ್ಯಕ್ರಮವನ್ನು ಎಸೆಸ್ಸೆಫ್ (ವೆಸ್ಟ್) ಅಧ್ಯಕ್ಷ ನವಾಝ್ ಸಖಾಫಿ ಉದ್ಘಾಟಿಸಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗೈದ ಡಾ.ಎಮ್ಮೆಸ್ಸೆಂ ಅಬ್ದುರ‌್ರಶೀದ್ ಝೈನಿ ಕಾಮಿಲ್ ಸಖಾಫಿ ‘ಮನುಷ್ಯರ ಮಧ್ಯೆ ಪ್ರೀತಿ, ವಿಶ್ವಾಸ ತುಂಬಿದ, ಮಾನವೀಯತೆ ಬೆಸೆದ ಪ್ರವಾದಿ ಮುಹಮ್ಮದ್ (ಸ)ರವರ ಜೀವನ ಸಂದೇಶ ಸಾರ್ವಕಾಲಿಕವಾದುದು. ಅವರ ಸಂದೇಶವನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಿಡಿಸಿಕೊಳ್ಳಬೇಕು. ಆ ಮೂಲಕ ಇಸ್ಲಾಮ್‌ನ ನೈಜ ಸಂದೇಶವನ್ನು ಜಗತ್ತಿಗೆ ಸಾರಲು ಸಾಧ್ಯವಿದೆ’ ಎಂದು ಹೇಳಿದರು.

ಲೇಖಕ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಪ್ರವಾದಿ ಸಂದೇಶ ಭಾಷಣಗೈದರು. ಕಾರ್ಯಕ್ರಮದಲ್ಲಿ ಎಸ್‌ವೈಎಸ್ (ವೆಸ್ಟ್) ಅಧ್ಯಕ್ಷ ಮುಹಮ್ಮದಲಿ ಸಖಾಫಿ, ಇಸಾಕ್ ಝುಹ್‌ರಿ, ಇಕ್ಬಾಲ್ ಮದ್ಯನಡ್ಕ, ಖುಬೈಬ್ ತಂಳ್ ಮತ್ತಿತರರು ಪಾಲ್ಗೊಂಡಿದ್ದರು.

ಅಲ್ತಾಫ್ ಶಾಂತಿಭಾಗ್ ಸ್ವಾಗತಿಸಿದರು. ನೌಫಾಲ್ ಫರೀದ್‌ನಗರ ವಂದಿಸಿದರು. ಖಲೀಲ್ ಮಾಲಿಕ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News