×
Ad

ಕಾಪುವಿನಲ್ಲಿ ಇಲಲ್ ಹಬೀಬ್ ಮೀಲಾದ್ ಸಂದೇಶ ರ‍್ಯಾಲಿ

Update: 2022-10-21 23:02 IST

ಕಾಪು : ಹಝ್ರತ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವ ಸಲ್ಲಮ್‍ರವರ ಜನ್ಮ ಮಾಸಾಚರಣೆಯ ರಬೀವುಲ್ ಅವ್ವಲ್ ತಿಂಗಳ ಅಂಗವಾಗಿ  ಎಸ್‍ವೈಎಸ್ ಮತ್ತು ಎಸ್‍ಎಸ್‍ಎಫ್ ಉಡುಪಿ ಜಿಲ್ಲಾ ಸಮಿತಿಯ ಅಧಿನದಲ್ಲಿ ಜಿಲ್ಲಾ ಮಟ್ಟದ ಇಲಲ್ ಹಬೀಬ್ ಮೀಲಾದ್ ರ‍್ಯಾಲಿ ಶುಕ್ರವಾರ ಕಾಪುವಿನಲ್ಲಿ ನಡೆಯಿತು.

ಕಾಪು, ಪೊಲಿಪು ಮಸ್ಜಿದ್‍ನಿಂದ ಆರಂಭಗೊಂಡು ರಾಷ್ಟ್ರೀಯ ಹೆದ್ದಾರಿ 66- ಕಾಪು ಪೇಟೆಯ ಮೂಲಕ ಪೊಲಿಪು ಜುಮ್ಮಾ ಮಸೀದಿಯಲ್ಲಿ ಸಮಾಪ್ತಿಗೊಂಡಿತು. ರ‍್ಯಾಲಿಯಲ್ಲಿ ದಫ್ ಹಾಗೂ ಎಸ್‍ಎಸ್‍ಎಫ್, ಎಸ್‍ವೈಎಸ್, ಕರ್ನಾಟಕ ಮುಸ್ಲಿಮ್ ಜಮಾಅತ್‍ನ ಕಾಯಕರ್ತರು ಭಾಗವಹಿಸಿದ್ದರು.

ಪೊಲಿಪು ಸಯ್ಯಿದ್ ಶಂಸುದ್ಧೀನ್ ವಲಿಯುಲ್ಲಾಹಿ ದರ್ಗಾ ಝಿಯಾರತ್ ನಡೆಯಿತು. ಎಸ್‍ವೈಎಸ್ ಜಅಫರ್ ಅಸ್ಸಖಾಫ್ ತಂಙಳ್ ರ್ಯಾಲಿಗೆ ಚಾಲನೆ ನೀಡಿದರು. ಕಾಪು ಖಾಝಿ ಶೈಖುನಾ ಪಿ.ಬಿ. ಅಹ್ಮದ್ ಮುಸ್ಲಿಯಾರ್ ಪ್ರಾರ್ಥಿಸಿದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಎಂ.ಎಚ್.ಅಹ್ಮದ್ ಶಬೀರ್ ಸಖಾಫಿ ರ‍್ಯಾಲಿಯನ್ನು ಮುನ್ನಡೆಸಿದರು. ಎಸ್‍ವೈಎಸ್ ಜಿಲ್ಲಾಧ್ಯಕ್ಷ ಅಡ್ವಕೇಟ್ ಹಂಝತ್ ಹೆಜಮಾಡಿ ಕೋಡಿ, ಎಸ್‍ಎಸ್‍ಎಫ್ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಸಂದೇಷ ಭಾಷಣ ಗೈದರು.

ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳು, ಸುನ್ನೀ ದಾವತೇ ಇಸ್ಲಾಮೀ ಉಡುಪಿ ಜಿಲ್ಲೆಯ ಅಧ್ಯಕ್ಷ ಸಯ್ಯಿದ್ ಫರೀದ್ ಬಯ್ ಉಡುಪಿ, ಎಸ್‍ವೈಎಸ್ ಜಿಲ್ಲಾ ಉಪಾಧ್ಯಕ್ಷ ಎಚ್. ಅಬ್ದುಲ್ಲಾ ಸುಪರ್ ಸ್ಟಾರ್, ಎಸ್‍ವೈಎಸ್ ಕೋಶಾಧಿಕಾರಿ ಮುಹಿಯ್ಯುದ್ದೀನ್ ಹಾಜಿ ಗುಡ್ವಿಲ್, ಎಸ್‍ವೈಎಸ್ ಪ್ರಭಾರ ಪ್ರಧಾನ ಕಾರ್ಯದರ್ಶಿ ಬಶೀರ್ ಮುಸ್ಲಿಯಾರ್ ಮಜೂರು, ಎಸ್‍ಎಸ್‍ಎಫ್ ರಾಜ್ಯ ಕಾರ್ಯದರ್ಶಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಸುನ್ನೀ ವಿಧ್ವಾಂಸ ಒಕ್ಕೂಟ ಉಡುಪಿ ವಲಯದ  ಅಧ್ಯಕ್ಷ ಎಂ.ಕೆ. ಅಬ್ದುರ್ರಶೀದ್ ಕಾಮಿಲ್ ಸಖಾಫಿ,  ಎಸ್‍ವೈಎಸ್ ಉಡುಪಿ ಜಿಲ್ಲಾ ಕೋಶಾಧಿಕಾರಿ ಮುಹಿಯ್ಯುದ್ದೀನ್ ಹಾಜಿಗುಡ್ವೀಲ್, ಎಸ್‍ಎಸ್‍ಎಫ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಕೆ. ಇಬ್ರಾಹಿಂ ಮಜೂರು, ಕಾಪು ತಾಲ್ಲೂಕು ಕರ್ನಾಟಕ ಮುಸ್ಲಿಮ್ ಜಮಾಅತ್‍ನ ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್‍ ಅದ್ದು ಉಪಸ್ಥಿತರಿದ್ದರು. ಎಸ್‍ಎಸ್‍ಎಫ್ ರಾಜ್ಯ ಸದಸ್ಯರ ಮುಹಮ್ಮದ್ ರಕೀಬ್ ಕನ್ನಂಗಾರ್ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News