ಬೆಂಗಳೂರು: ಕಳ್ಳತನಕ್ಕೆ ಹೋಗಿದ್ದ ಮನೆಯಲ್ಲಿಯೇ ಆತ್ಮಹತ್ಯೆ!
Update: 2022-10-22 17:19 IST
ಬೆಂಗಳೂರು, ಅ.22: ವ್ಯಕ್ತಿಯೊರ್ವ ಕಳ್ಳತನಕ್ಕೆ ಹೋಗಿದ್ದ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ಇಲ್ಲಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯನ್ನು ದಿಲೀಪ್ ಬಹದ್ದೂರ್ ಎಂದು ಗುರುತಿಸಲಾಗಿದೆ.
ಮನೆಗೆ ಬೀಗ ಹಾಕಿಕೊಂಡು ಯೂರೋಪ್ ಪ್ರವಾಸ ಹೋಗಿದ್ದ ಸಾಫ್ಟ್ ವೇರ್ ಕಂಪೆನಿಯೊಂದರ ಉದ್ಯೋಗಿಯ ಮನೆಗೆ ನುಗಿದ್ದ ದಿಲೀಪ್ ಬಹದ್ದೂರ್, ದೇವರ ಕೋಣೆ ಮುಂದೆ ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮನೆ ಮಾಲಕ ವಾಪಸ್ಸು ಬಂದು ಬಾಗಿಲು ತೆರದಾಗ ಈ ಪ್ರಕರಣ ನಿನ್ನೆ ಬೆಳಕಿಗೆ ಬಂದಿದೆ.
ದಿಲೀಪ್ ಬಹದ್ದೂರ್ 2006ರಲ್ಲಿ ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಕೃತ್ಯದಲ್ಲಿ ಬಂಧಿಯಾಗಿದ್ದ ಎನ್ನಲಾಗಿದೆ.
ಈ ಸಂಬಂಧ ಇಂದಿರಾನಗರ ಠಾಣಾ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.