×
Ad

ಬೆಂಗಳೂರು | ಚೀನಾ ಮೂಲದ ಕಂಪೆನಿಗಳಿಂದ ವಂಚನೆ ಪ್ರಕರಣ: ಈಡಿ ದಾಳಿ, 78 ಕೋಟಿ ರೂ. ಜಪ್ತಿ

Update: 2022-10-22 21:36 IST
Photo- Pti

ಬೆಂಗಳೂರು, ಅ.22: ಚೀನಾ ಮೂಲದ ಸಾಲು ನೀಡುವ ಕಂಪೆನಿಗಳಿಂದ ವಂಚನೆ ಪ್ರಕರಣ ಸಂಬಂಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ಈಡಿ ಅಧಿಕಾರಿಗಳು(ಜಾರಿ ನಿರ್ದೇಶನಾಲಯ) ನಗರದ 5 ಕಡೆ ದಾಳಿ ಮಾಡಿ 78 ಕೋಟಿ ಹಣ ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಕೆಲ ತಿಂಗಳ ಹಿಂದೆ ಉದ್ಯೋಗದ ಭರವಸೆ ಕೊಟ್ಟು ಯುವಕರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಚೀನಾ ಮೂಲದ ಕೀಪ್‍ಶೇರ್ ಆ್ಯಪ್‍ಗೆ ಸೇರಿದ 12 ಕೇಂದ್ರಗಳ ಮೇಲೆ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 5.88 ಕೋಟಿ ನಗದು ಹಾಗೂ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ 18 ಎಫ್‍ಐಆರ್ ದಾಖಲಿಸಲಾಗಿತ್ತು.ಈ ಸಂಬಂಧ ತನಿಖೆ ನಡೆಸಿದಾಗ ಸಾಲ ನೀಡುವ ಎಲ್ಲ ಆ್ಯಪ್‍ಗಳ ಮೂಲ ಚೀನಾವೆಂದು ಪತ್ತೆಯಾಗಿತ್ತು. ಭಾರತೀಯ ಮೂಲದ ಉದ್ಯೋಗಿಗಳನ್ನು ಕಂಪೆನಿ ನಿರ್ದೇಶಕರನ್ನಾಗಿ ನೇಮಿಸಿ ವಂಚನೆ ಮಾಡುತ್ತಿದ್ದ ಆರೋಪ ಕೇಳಿಬಂದಿತ್ತು. ಅಲ್ಲದೆ, ನಗದು ಸಹ ಅಕ್ರಮವಾಗಿ ವಿದೇಶಿ ಖಾತೆಗಳಿಗೆ ವರ್ಗಾಯಿಸಲಾಗುತಿತ್ತು. ಈ ಆ್ಯಪ್‍ಗಳ ವಿರುದ್ಧ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News