ದೇರಳಕಟ್ಟೆ: ನಿಟ್ಟೆ ಕ್ಯಾಂಪಸ್ ನಲ್ಲಿ ನೂತನ ವೈಜ್ಞಾನಿಕ ತ್ಯಾಜ್ಯ ಘಟಕ ಉದ್ಘಾಟನೆ

Update: 2022-10-23 14:28 GMT

ಕೊಣಾಜೆ: ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಆರಂಭಿಸಲಾದ ನೂತನ  ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಘಟಕದ ಉದ್ಘಾಟನೆಯನ್ನು ಮಂಗಳೂರು ಶ್ರೀ ರಾಮಕೃಷ್ಣ ಮಠದ ಏಕಗಮ್ಯಾನಂದ  ಸ್ವಾಮೀಜಿ ಅವರು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಸ್ವಚ್ಛ ಮಂಗಳೂರು ಸ್ವಯಂ ಸೇವಕರಿಂದ ನಡೆಯುತ್ತಿರುವ  ಮಂಗಳ ಸಂಪನ್ಮೂಲ‌ ನಿರ್ವಹಣೆ ಸಂಸ್ಥೆಯ ಯೋಜನೆಗಳು ಬಹಳ ಉಪಯುಕ್ತವಾಗಿದೆ. ಅತ್ಯಂತ ಪರಿಣಾಮಕಾರಿಯಾದ ಈ ಕಾರ್ಯದಲ್ಲಿ  ಅನೇಕ ಪ್ರಯೋಜನಗಳಿವೆ.  ಇಲ್ಲಿನ ಘಟಕ ಮಾದರಿ ಆಗಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ ತ್ಯಾಜ್ಯ ನಿರ್ವಹಣೆ ಸಂಕೀರ್ಣ ವಿಚಾರ.  ಮೇಲ್ನೋಟಕ್ಕೆ ಲಾಭದಾಯಕ ಅಂತ ಕಂಡರೂ ಅಷ್ಟು ಸುಲಭ ಸಾಧ್ಯವಲ್ಲದ ನಿರ್ವಹಣೆ ಯೋಜನೆ ಆಗಿದ್ದು ಈ ದಿನಗಳಲ್ಲಿ ನಿಟ್ಟೆ ವಿವಿಯಲ್ಲಿ ಅಳವಡಿಸಿರುವ ವೈಜ್ಞಾನಿಕ ವಿಧಾನ ನಿಜಕ್ಕೂ ಮಾದರಿ ಆಗಲಿದೆ. ಭವಿಷ್ಯದಲ್ಲಿ ಮನಾಪ ಕೂಡಾ ಇಲ್ಲಿನ ಸೌಲಭ್ಯಗಳನ್ನು ಅಳವಡಿಸುವ ನಿಟ್ಟಿನಲ್ಲಿ ಚಿಂತಿಸಬಹುದು. ಜಿಲ್ಲಾಡಳಿತದ ವತಿಯಿಂದ ಅಭಿನಂದನೆ ಗಳನ್ನು ಸಲ್ಲಿಸುತ್ತೇನೆ ಎಂದರು.

ಅಧ್ಯಕ್ಷತೆ ವಹಿಸಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿ ನಿಟ್ಟೆ ಶಿಕ್ಷಣ ಸಂಸ್ಥೆ ಆರಂಭಿಸಿರುವ ತ್ಯಾಜ್ಯ ನಿರ್ವಹಣಾ ಘಟಕ ಅತ್ಯಂತ ಅವಶ್ಯವೂ ಆಗಿದೆ. ಇಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಇದು ಮಾದರಿ ಆಗಲಿದೆ. ಕ್ಯಾಂಪಸ್ ನಲ್ಲೇ ಹಸಿ ಕಸ ಒಣ ಕಸ ಬೇರ್ಪಡಿಸುವ ಕಾರ್ಯ ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ಆಗಲಿರುವುದರಿಂದ ನಿಟ್ಟೆ ಸಂಸ್ಥೆ ಮೆರೆದ ಜವಬ್ದಾರಿಯುತ ಕಾರ್ಯ ರಾಷ್ಟ್ರಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಲಿದೆ ಎಂದು ಹೇಳಿದರು.

ನಿಟ್ಟೆ ವಿವಿ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ ಉಪಸ್ಥಿತರಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ಮಂಗಳ ರಿಸೋರ್ಸ್ ಮೆನೇಜ್ ಮೆಂಟ್ ಪ್ರೈ ಲಿ. ನ ಆಡಳಿತ ನಿರ್ದೇಶಕ ಟ್ ದಿಲ್ ರಾಜ್ ಆಳ್ವ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News