ವಿಟ್ಲ: ಗಾಂಧಿನಗರದಲ್ಲಿ ಮೀಲಾದ್ ಫೆಸ್ಟ್
Update: 2022-10-24 13:26 IST
ವಿಟ್ಲ, ಅ.24: ವಿಟ್ಲ ಗಾಂಧಿನಗರದ ಮಸ್ಜಿದುಲ್ ಬದ್ರಿಯಾ ಮತ್ತು ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಮೀಲಾದ್ ಫೆಸ್ಟ್ ಕಾರ್ಯಕ್ರಮವು ಮಸೀದಿ ಅಧ್ಯಕ್ಷ ಆಸಿಫ್ ನೆಕ್ಕರೆಕಾಡು ಅಧ್ಯಕ್ಷತೆಯಲ್ಲಿ ನಡೆಯಿತು.
ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ನಸೀಹ್ ದಾರಿಮಿ ದುಆದ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು, ಬುರ್ದಾ, ಖವಾಲಿ, ನಬಿ ಮದ್‌ಹ್ ಹಾಡುಗಳು ನಡೆದವು.
ಅಬೂಬಕರ್ ಅನಿಲಕಟ್ಟೆ ಮತ್ತು ರವೂಫ್ ಮಾಲಮೂಲೆ ತೀರ್ಪುಗಾರರಾಗಿದ್ದರು.
ವೇದಿಕೆಯಲ್ಲಿ ಸದರ್ ಖಾಸಿಂ ಸಅದಿ ಉಪಾಧ್ಯಕ್ಷ ಇಬ್ರಾಹೀಂ ಕುಂಞಿ, ಕಾರ್ಯದರ್ಶಿ ಲತೀಫ್, ಜತೆ ಕಾರ್ಯದರ್ಶಿ ಮುನೀರ್ ಗಮಿ, ಸದಸ್ಯರಾದ ಕೆ.ಎಂ.ಸಾದಿಕ್, ರಝಾಕ್ ಮಾರ್ನಮಿಗುಡ್ಡೆ, ಮನ್ಸೂರ್ ಹಾನೆಸ್ಟ್, ಅಬೂಬಕರ್ ಮುಸ್ಲಿಯಾರ್, ಖಲಂದರ್ ಕೋರೆ, ಅಬ್ದುಲ್ ಹಮೀದ್ ಗಾಂದಿನಗರ, ಕೆ.ಎಂ.ಮುಹಮ್ಮದ್, ಇಹ್ಲಾನ್, ಅಲ್ತಾಫ್ ಗಮಿ ಮುಂತಾದವರು ಉಪಸ್ಥಿತರಿದ್ದರು.
ಮುಸ್ತಫಾ ಹನೀಫಿ ಕಾರ್ಯಕ್ರಮ ನಿರೂಪಿಸಿದರು.