ರಾಮ ಮಂಜ ಮರಾಠಿಗೆ ಜನಪದ ವೈದ್ಯಸಿರಿ ಪ್ರಶಸ್ತಿ ಪ್ರದಾನ
ಉಡುಪಿ : ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಏಳನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯಲ್ಲಿ ಕಾಲೇಜಿನ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ೨೫,೦೦೦ರೂ. ನಗದು ಹಾಗೂ ಸನ್ಮಾನ ಪತ್ರವನ್ನೊಳಗೊಂಡ ಜನಪದ ವೈದ್ಯಸಿರಿ ರಾಷ್ಟ್ರೀಯ ಪ್ರಶಸ್ತಿಯನ್ನು ಹೊನ್ನಾವರದ ಜನಪದ ವೈದ್ಯ ರಾಮ ಮಂಜ ಮರಾಠಿ ಅವರಿಗೆ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಮಮತಾ ಕೆ.ವಿ. ವಹಿಸಿದ್ದರು. ಮುಖ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿದರು. ಹರ್ ದಿನ್ ಹರ್ ಘರ್ ಆಯುರ್ವೇದ ಕಾರ್ಯಕ್ರಮದ ವರದಿಯನ್ನು ಶರೀರ ಕ್ರಿಯ ವಿಭಾಗದ ಮುಖ್ಯಸ್ಥ ಡಾ.ಎಸ್.ಆರ್.ಮೊಹರೆರ್ ವಾಚಿಸಿದರು.
ಕಾಲೇಜಿನ ಕಲಾ ಹಾಗೂ ಸಾಂಸ್ಕೃತಿಕ ವಿಭಾಗದ ವತಿಯಿಂದ ನಿದಿರೆ ಎಂಬ ಶೀರ್ಷಿಕೆಯ ಆಯುರ್ವೇದದ ಹಾಡನ್ನು ಬಿಡುಗಡೆಗೊಳಿಸಲಾಯಿತು. ಎಸ್‌ಡಿಎಂ ಆಯುರ್ವೇದ ಔಷಧ ತಯಾರಿಕಾ ಘಟಕದ ಜನರಲ್ ಮ್ಯಾನೇಜರ್ ಡಾ.ಮುರಳೀಧರ್ ಬಲ್ಲಾಳ್ ಉಪಸ್ಥಿತರಿದ್ದರು.
ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ.ನಿರಂಜನ್ ರಾವ್ ಸ್ವಾಗತಿಸಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್. ವಂದಿಸಿದರು. ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಸದಸ್ಯೆ ಡಾ. ನಾಗರತ್ನ ಎಸ್.ಜೆ. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ ೧೦೦ಕ್ಕೂ ಹೆಚ್ಚು ಆರೋಗ್ಯ ಆಸಕ್ತರಿಗೆ ಬದಲಾದ ಜೀವನ ಶೈಲಿಯಿಂದ ಉಂಟಾಗುವ ಖಾಯಿಲೆಗಳು ಹಾಗೂ ಅವುಗಳನ್ನು ಪ್ರತಿಬಂಧಿಸುವಲ್ಲಿ ಆಯುರ್ವೇದದ ಪಾತ್ರ ಎಂಬುವುದರ ಬಗ್ಗೆ ಮಾಹಿತಿಯನ್ನು ಕಾಲೇಜಿನ ವೈದ್ಯರುಗಳಿಂದ ನೀಡಲಾಯಿತು. ಕಾರ್ಯಕ್ರಮವನ್ನು ಕೇಂದ್ರದ ಮುಖ್ಯಸ್ಥ ಡಾ.ರವಿಕೃಷ್ಣ ಎಸ್. ಹಾಗೂ ಸದಸ್ಯರಾದ ಡಾ.ಅರ್ಹಂತ್ ಕುಮಾರ್, ಡಾ.ರವಿ ಕೆ.ವಿ., ಡಾ.ಸುಶ್ಮಿತಾ ವಿ.ಎಸ್. ನಡೆಸಿಕೊಟ್ಟರು.