×
Ad

ಹ್ಯಾಕರ್ಸ್ ಕಾಟ: ಬೆಂಗಳೂರು ಪೊಲೀಸ್ ವೈಬ್‍ಸೈಟ್ ವಿಳಾಸ ಬದಲಾವಣೆ

Update: 2022-10-24 19:31 IST

ಬೆಂಗಳೂರು, ಅ.24: ಪೊಲೀಸ್ ಇಲಾಖೆಯ ಅಧಿಕೃತ ಖಾತೆಗಳನ್ನು ಹ್ಯಾಕ್ ಮಾಡುತ್ತಿರುವ ಹಿನ್ನೆಲೆ ಪೊಲೀಸ್ ವೈಬ್‍ಸೈಟ್ ವಿಳಾಸ  ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅಧಿಕೃತ ಮಾಹಿತಿ ನೀಡಿದ್ದು, ಈ ಹಿಂದೆ ಬೆಂಗಳೂರು ನಗರ ಪೊಲೀಸರ ಅಧಿಕೃತ ಜಾಲತಾಣದ ವಿಳಾಸ www.bcp.gov.in  ಇತ್ತು. ಆದರೆ, ಇದೀಗ www.bcp.karnataka.gov.in ಎಂದು ಬದಲಾಗಲಿದೆ ಎಂದು ತಿಳಿಸಿದರು.

ವೆಬ್‍ಸೈಟ್‍ಗೆ ಸಂಬಂಧಿಸಿದ ಸುರಕ್ಷತೆಗಾಗಿ ಈ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ ಎಂದೂ ಆಯುಕ್ತರು ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News