×
Ad

ರಾಜ್ಯ ಸರಕಾರದಿಂದಲೇ ಆ್ಯಪ್‍ ಆಧಾರಿತ ಟ್ಯಾಕ್ಸಿ ಸೇವೆಗೆ ಕನಿಷ್ಠ ದರ ನಿಗದಿ

Update: 2022-10-27 22:19 IST

ಬೆಂಗಳೂರು, ಅ.27: ಓಲಾ, ಉಬರ್ ಒಳಗೊಂಡತೆ ಆ್ಯಪ್‍ ಆಧಾರಿತ ಟ್ಯಾಕ್ಸಿ ಸೇವೆಯಲ್ಲಿ ಆಟೊರಿಕ್ಷಾಗಳ ಸೇವೆಗಳ ಪ್ರಯಾಣ ದರವನ್ನು ರಾಜ್ಯ ಸರಕಾರವೇ ನಿಗದಿಪಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಕರ್ನಾಟಕರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮಕ್ಕೆ ಕೆಲ ಅಂಶಗಳನ್ನು ಸೇರ್ಪಡೆ ಮಾಡುವ ಮೂಲಕ ಆಟೊರಿಕ್ಷಾ ಸೇವೆಗಳನ್ನು ಅಧಿಕೃತಗೊಳಿಸಲು ಸಾರಿಗೆ ಇಲಾಖೆ ಮುಂದಾಗಿತ್ತು. ಆದರೆ, ಇದೀಗ ಕನಿಷ್ಠ ಪ್ರಯಾಣದರ ನಿಗದಿ ಮಾಡಲುಸಹ ಗಂಭೀರಚಿಂತನೆ ನಡೆಸಿದೆ.

ಆ್ಯಪ್‍ ಆಧಾರಿತ ಟ್ಯಾಕ್ಸಿ ಕಂಪೆನಿಗಳು ರಜೆ ದಿನ, ತಡರಾತ್ರಿ ಸಂದರ್ಭದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರವಸೂಲಿ ಮಾಡುತ್ತಿರುವ ದೂರುಗಳು ಕೇಳಿಬಂದಿವೆ. ಹೀಗಾಗಿ, ಜಿಎಸ್ಟಿಯೂ ಒಳಗೊಂಡತೆ ಒಂದು ನಿರ್ದಿಷ್ಟದರ ಅಧಿಕೃತಗೊಳಿಸಲು ಸರಕಾರ ಮುಂದಾಗಿದೆ.

ಪ್ರಸ್ತುತ 2 ಕಿಮೀಗೆ 30ರೂ.ದರವನ್ನು ಸಾರಿಗೆ ಇಲಾಖೆ ನಿಗದಿಪಡಿಸಿದೆ. ಈ ಹಿಂದೆರಾಜ್ಯ ಸರಕಾರವು ಎರಡೂ ಅಗ್ರಿಗೇಟರ್ ಆ್ಯಪ್ ಕಂಪೆನಿಗಳಿಗೆ ಹೊಸ ದರ ನಿಗದಿಪಡಿಸಲು 15 ದಿನಗಳ ಗಡುವು ನೀಡಿತ್ತು. ಗಡುವು ಸಮೀಪಿಸುತ್ತಿದ್ದಂತೆ ಇದೀಗ ಸರಕಾರವೇ ಹೊಸ ದರ ನಿಗದಿಪಡಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Similar News