×
Ad

ಪಟಾಕಿ ಸಿಡಿತ: ಬೆಂಗಳೂರಿನಲ್ಲಿ 85ಕ್ಕೂ ಅಧಿಕ ಮಂದಿಗೆ ಗಾಯ

Update: 2022-10-28 00:51 IST

ಬೆಂಗಳೂರು, ಅ.27:ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿತದಿಂದ ರಾಜಧಾನಿ ಬೆಂಗಳೂರಿನಲ್ಲಿ 85ಕ್ಕೂ ಅಧಿಕ ಮಂದಿಯ ಕಣ್ಣಿಗೆ ಹಾನಿಯಾಗಿದ್ದು, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಣ್ಣಿಗೆ ಹಾನಿಗೊಂಡ 80 ಮಂದಿಯಲ್ಲಿ 12 ಮಂದಿಗೆ ತೀವ್ರ ಹಾನಿಯಾಗಿದೆ.ಅದರಲ್ಲೂ ಆರು ಮಂದಿಗೆ ದೃಷ್ಟಿ ಮರಳುವ ಸಾಧ್ಯತೆ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ.ನಗರ ವ್ಯಾಪ್ತಿಯ ಆಸ್ಪತ್ರೆಗಳ ಪೈಕಿಮಿಂಟೋ ಆಸ್ಪತ್ರೆಯಲ್ಲಿ 24 ಮಂದಿ ಚಿಕಿತ್ಸೆ ಪಡೆದಿದ್ದು, ಇದರಲ್ಲಿ ಐದು ಮಂದಿಗೆ ದೃಷ್ಟಿಹಾನಿಯಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.

ಅದೇ ರೀತಿ, ನಾರಾಯಣ ನೇತ್ರಾಲಯದಲ್ಲಿ 23 ಮಂದಿ ಪಟಾಕಿ ಸಿಡಿತದಿಂದ ಕಣ್ಣುಗಳಿಗೆಹಾನಿಮಾಡಿಕೊಂಡು ಚಿಕಿತ್ಸೆ ಪಡೆದರೆ ನಿನ್ನೆ ಒಂದೇ ದಿನ 10 ಮಂದಿ ಚಿಕಿತ್ಸೆ ಪಡೆದಿದ್ದು, ಈ ಪೈಕಿ 8 ಮಂದಿ ಕಣ್ಣುಗಳಿಗೆ ಗಂಭೀರ ಗಾಯಗಳಾಗಿದೆ. ಇವರಿಗೆ ದೃಷ್ಟಿಹಾನಿಯಾಗಿ ಶಸ್ತ್ರಚಿಕಿತ್ಸೆಗೆಸೂಚಿಸಲಾಗಿದೆ.

ಪಟಾಕಿಯಿಂದ ಕಣ್ಣಿಗೆ ಹಾನಿಮಾಡಿಕೊಂಡ 20 ಮಂದಿ ನೇತ್ರಧಾಮದಲ್ಲಿ, 13 ಮಂದಿ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ, ನಾಲ್ವರು ಆಸ್ಟರ್ ಸಿಎಂಐ ಇಬ್ಬರು ಮೋದಿಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಲ್ವರು ಪಟಾಕಿಯಿಂದ ಸುಟ್ಟ ಗಾಯಗೊಂಡುಚಿಕಿತ್ಸೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Similar News