ಉಳ್ಳಾಲ : ಉಚಿತ ಆಧಾರ್ ನೋಂದಣಿ ಶಿಬಿರ
Update: 2022-10-29 13:25 IST
ಉಳ್ಳಾಲ : ಸೋಶಿಯಲ್ ಅಚೀವ್ ಮೆಂಟ್ ಫೋರಮ್ ತಲಪಾಡಿ ಇದರ ಆಶ್ರಯದಲ್ಲಿ ಉಚಿತ ಆಧಾರ್ ನೋಂದಣಿ ಶಿಬಿರ ಶನಿವಾರ ನಡೆಯಿತು.
ಈ ಕಾರ್ಯಕ್ರಮ ಉದ್ಘಾಟಿಸಿದ ತಲಪಾಡಿ ಗ್ರಾ.ಪಂ.ಸದಸ್ಯ ಇಸ್ಮಾಯಿಲ್ ತಲಪಾಡಿ ಮಾತನಾಡಿ ಸಂಸ್ಥೆಯ ಕಾರ್ಯ ಕ್ರಮ ದ ಬಗ್ಗೆ ವಿವರಿಸಿ ಶುಭಹಾರೈಸಿದರು.
ಈ ಆಧಾರ್ ನೋಂದಣಿ ಜೊತೆಗೆ ಆಧಾರ್ ತಿದ್ದುಪಡಿ, ಆ ಬಾ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್, ಹೊಸ ಚುನಾವಣಾ ಗುರುತಿನ ಚೀಟಿ ಹಾಗೂ ತಿದ್ದುಪಡಿ ವ್ಯವಸ್ಥೆ ಯನ್ನು ಕೂಡಾ ಉಚಿತವಾಗಿ ಒದಗಿಸಲಾಯಿತು.
ಈ ಕಾರ್ಯಕ್ರಮ ದಲ್ಲಿ ಸೋಶಿಯಲ್ ಅಚೀವ್ ಮೆಂಟ್ ಫೋರಮ್ ಅಧ್ಯಕ್ಷ ಶೇಕ್ ಮೊಹಮ್ಮದ್ ಕುಂಞಿ, ಉದ್ಯಮಿ ಝಾಕೀರ್, ನವಾಝ್, ಸೋಶಿಯಲ್ ಫಾರೂಕ್, ಅಬ್ದುಲ್ ರಹಿಮಾನ್, ಶಬೀರ್ ತಲಪಾಡಿ, ಉಳ್ಳಾಲ ಠಾಣಾ ಎ.ಎಸ್ ಐ ಮನ್ಸೂರ್ ಮುಲ್ಕಿ , ಹುಸೈನ್ ಐಸನ್ ಮತ್ತಿತರರು ಉಪಸ್ಥಿತರಿದ್ದರು.
ಬಿ.ಎಸ್.ಇಸ್ಮಾಯಿಲ್ ತಲಪಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.