‘ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ರೈಲಿಗೆ ಬುಕ್ಕಿಂಗ್ ಪ್ರಾರಂಭ: ಸಚಿವೆ ಶಶಿಕಲಾ ಜೊಲ್ಲೆ

Update: 2022-10-29 17:17 GMT

ಬೆಂಗಳೂರು, ಅ. 29: ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ‘ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ' ಪ್ಯಾಕೇಜ್ ಟೂರ್‍ಗೆ ಬುಕ್ಕಿಂಗ್ ಪ್ರಾರಂಭವಾಗಿದೆ. ಈ ಯೋಜನೆಯ ಮೊದಲ ರೈಲು ನ.11ಕ್ಕೆಬೆಂಗಳೂರಿನಿಂದ ಹೊರಡಲಿದ್ದು, ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. 

ಶನಿವಾರ ನಗರದಲ್ಲಿ ಪ್ರಕಟಣೆ ನೀಡಿರುವ ಅವರು, ‘ಮಹತ್ವಾಕಾಂಕ್ಷಿ ಯೋಜನೆಯ ಬುಕ್ಕಿಂಗ್ ಪ್ರಾರಂಭವಾಗಲಿದ್ದು, ‘ದಿವ್ಯ ಕಾಶಿ-ಭವ್ಯಕಾಶಿ'ಯನ್ನ ರಾಜ್ಯದಭಕ್ತಾದಿಗಳುಹೆಚ್ಚಿನಸಂಖ್ಯೆಯಲ್ಲಿಭೇಟಿ ನೀಡಿ ಕಾಶಿ ವಿಶ್ವನಾಥನ ದರ್ಶನ  ಪಡೆಯಲಿ ಎನ್ನುವ ಉದ್ದೇಶದಿಂದ ಈ ವಿಶೇಷ ಪ್ಯಾಕೇಜ್ ಟೂರ್ ಅನ್ನು ಆಯೋಜಿಸಲಾಗಿದೆ. ಕೇಂದ್ರ ಸರಕಾರದ ಭಾರತ್ ಗೌರವ್ ಯೋಜನೆಯ ಅಡಿಯಲ್ಲಿ ರೈಲನ್ನು ಮುಜರಾಯಿ ಇಲಾಖೆ ಗುತ್ತಿಗೆಗೆ ಪಡೆದು ಈ ಯೋಜನೆ ಕಾರ್ಯತಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕದಲ್ಲೂ ರೈಲು ಹತ್ತುವ ಅವಕಾಶ: ಬೆಂಗಳೂರಿನಿಂದ ಹೊರಡುವ ಈ ರೈಲನ್ನು ಹತ್ತಲು ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು, ಬಿರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯ ಮತ್ತು ಪ್ರಯಾಗರಾಜ್‍ಗೆ ಸಂಚರಿಸಲಿದೆ' ಎಂದು ಹೇಳಿದ್ದಾರೆ.

5 ಸಾವಿರ ರೂ.ಸಹಾಯಧನ: ಐಆರ್‍ಸಿಟಿಸಿ ಸಹಭಾಗಿತ್ವದ ಈ ಟೂರ್ ಪ್ಯಾಕೇಜ್ ತಗೆದುಕೊಳ್ಳುವ ಪ್ರತಿ ವ್ಯಕ್ತಿಗೂ 5 ಸಾವಿರ ರೂ.ಸಹಾಯಧನವನ್ನ ಸರಕಾರ ನೀಡಲಿದೆ. ಈ ಪ್ಯಾಕೇಜ್‍ನ ದರ ಮೂಲತಃ 20ಸಾವಿರ ರೂ.ಪ್ರಯಾಣಿಕರು ಕೇವಲ 15ಸಾವಿರ ರೂ.ನೀಡಿದರೆ ಸಾಕು. ಉಳಿದ 5ಸಾವಿರ ರೂ.ಗಳನ್ನು ಸರಕಾರ ಸಹಾಯಧನದ ರೂಪದಲ್ಲಿ ನೀಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Similar News