ಕಾಪು: ಕಸಾಪದಿಂದ ಸಾರ್ವಜನಿಕ ಕವಿಗೋಷ್ಠಿಗೆ ಅಹ್ವಾನ
ಕಾಪು: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ನವೆಂಬರ್ 10 ಗುರುವಾರ ಪೂರ್ವಾಹ್ನ ಗಂಟೆ 10.00ಕ್ಕೆ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜರುಗುವ ಸಾರ್ವಜನಿಕ ಕವಿಗೋಷ್ಠಿಗೆ ಕಾಪು ಕಂದಾಯ ತಾಲೂಕು ವ್ಯಾಪ್ತಿಯ ಆಸಕ್ತ ಕವಿಗಳಿಂದ ಕವನಗಳನ್ನು ಅಹ್ವಾನಿಸಲಾಗಿದೆ.
"ಅಮೃತ ಭಾರತಿಗೆ ಕನ್ನಡದ ಆರತಿ" ಕಾರ್ಯಕ್ರಮಕ್ಕೆ ಪೂರಕವಾಗಿ ನವೆಂಬರ್ ತಿಂಗಳು ಕನ್ನಡ ಮಾಸಾಚರಣೆಯ ಪ್ರಯುಕ್ತ "ತಿಂಗಳ ಸಡಗರ" ಕಾರ್ಯಕ್ರಮದಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ದೇಶದ ಭವ್ಯ ಪರಂಪರೆ, ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಬಲಿದಾನ, ರಾಷ್ಟ್ರೀಯ ಭಾವೈಕ್ಯತೆ, ಸಾಮರಸ್ಯ, ಸೇವಾದರ್ಶ ಮೌಲ್ಯಗಳನ್ನು ಜಾಗೃತಗೊಳಿಸುವ ಹಾಗೂ ಕನ್ನಡ ನಾಡು, ನುಡಿ, ಸಂಸ್ಕೃತಿ, ಜಾನಪದ ಭವ್ಯ ಪರೆಂಪರೆಯನ್ನು ಬಿಂಬಿಸುವ ನಿಟ್ಟಿನಲ್ಲಿ ಪೂರಕವಾದ ಕವನಗಳನ್ನು ಅಹ್ವಾನಿಸಲಾಗಿದೆ.
ಆಸಕ್ತ ಹಿರಿಯ ಹಾಗೂ ಉದಯೋನ್ಮುಖ ಕವಿಗಳು ತಮ್ಮ ಕಿರು ಪರಿಚಯದೊಂದಿಗೆ ಕವನ ವಾಚನದಲ್ಲಿ ಮಂಡಿಸುವ ಕವನವನ್ನು ನವೆಂಬರ್ 7ರ ಒಳಗೆ ವಾಟ್ಸಪ್ ಮೂಲಕ ( 94482 52242 ಅಥವಾ 98459 54853)ಕ್ಕೆ ಕಳಿಸುವಂತೆ ಕಾಪು ತಾಲೂಕು ಕಸಾಪ ಅಧ್ಯಕ್ಷರ ಪ್ರಕಟನೆ ತಿಳಿಸಿದೆ.