ಉಡುಪಿ ಅಂಚೆ ವಿಭಾಗದಿಂದ ವಿಶೇಷ ಸ್ವಚ್ಛತಾ ಅಭಿಯಾನ
Update: 2022-10-31 22:54 IST
ಉಡುಪಿ: ಕೇಂದ್ರ ಸರಕಾರದ ಆದೇಶದನ್ವಯ ಭಾರತೀಯ ಅಂಚೆ ಇಲಾಖೆಯ ಉಡುಪಿ ಅಂಚೆ ವಿಭಾಗವು ಅ.2ರಿಂದ ಅ.31ರವರೆಗೆ ಉಡುಪಿ ಅಂಚೆ ವಿಭಾಗದ ಉಡುಪಿ ಪ್ರಧಾನ ಅಂಚೆ ಕಛೇರಿ, ಮಣಿಪಾಲ ಪ್ರಧಾನ ಅಂಚೆ ಕಚೇರಿ, ಕುಂದಾಪುರ ಪ್ರಧಾನ ಅಂಚೆ ಕಚೇರಿಗಳಲ್ಲಿ, ಎಲ್ಲಾ ಉಪ ಅಂಚೆ ಕಚೇರಿಗಳಲ್ಲಿ, ಎಲ್ಲಾ ಶಾಖಾ ಅಂಚೆ ಕಛೇರಿಗಳಲ್ಲಿ ಸ್ವಚ್ಛತಾ ಕಾರ್ಯ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಹಳೆ ಕಡತಗಳು, ಸುಮಾರು 538 ಕೆಜಿ ಅನುಪಯುಕ್ತ ಹಳೆಯ ಮರ, ಕಬ್ಬಿಣ, ಪ್ಲಾಸ್ಟಿಕ್ ಮುಂತಾದ ವಸ್ತುಗಳನ್ನು ವಿಲೇವಾರಿ ಮಾಡಲಾಯಿತು. ಈ ಸಂದರ್ಭದಲ್ಲಿ ಕೋಟ ಹಾಗೂ ಬಾರ್ಕೂರು ಉಪ ಅಂಚೆ ಕಚೇರಿಯ ಗೋಡೆಗಳಲ್ಲಿ ಸ್ವಚ್ಛತೆಯ ಮಹತ್ವ ಸಾರುವ ಬಿತ್ತಿ ಚಿತ್ರಗಳನ್ನು ಚಿತ್ರಿಸಲಾಯಿತು.
ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ಮುಂದಾಳತ್ವದಲ್ಲಿ ಸಹ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠಲ ಭಟ್ ಸಹಕಾರದೊಂದಿಗೆ ಈ ಮಾಸವಿಡೀ ವಿಶೇಷ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು.