×
Ad

ಕಾರ್ಕಳ ತಾಲೂಕು ಗ್ಯಾಸೆಟಿಯರ್ ರಚನಕಾರರಾಗಿ ಪಿ.ವಿ.ಆನಂದ್ ನೇಮಕ

Update: 2022-11-01 10:41 IST

ಕಾರ್ಕಳ: ನ.1: ಕಾರ್ಕಳ ತಾಲೂಕು ಗ್ಯಾಸೆಟಿಯರ್ ರಚನಕಾರರಾಗಿ ಪಿ.ವಿ.ಆನಂದ್ ನೇಮಕ ಮಾಡಿ ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ಆದೇಶ ಹೊರಡಿಸಿದೆ.

 ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕಾರ್ಕಳ ತಾಲೂಕಿನ ಸಮಗ್ರ ಮಾಹಿತಿಯನ್ನು ಒಳಗೊಂಡ ಗ್ರಂಥ ಪ್ರಕಟಿಸಲು ವಿಶೇಷ ಯೋಜನೆಯಡಿ ಹಮ್ಮಿಕೊಂಡಿದೆ. ಈ ಗ್ಯಾಸೆಟಿಯರ್ ರಚನೆಯ ಜವಾಬ್ಧಾರಿಯನ್ನು ಪಿ. ವಿ. ಆನಂದ್ ಅವರಿಗೆ ನೀಡಿ ಇಲಾಖೆಯು ಆದೇಶ ಹೊರಡಿಸಿದೆ.

ಈಗಾಗಲೇ 9 ವಿವಿಧ ಪುಸ್ತಕಗಳನ್ನು ಪ್ರಕಟಿಸಿ, 41 ಯಕ್ಷಗಾನ ಪ್ರಸಂಗಗಳನ್ನು ರಚಿಸಿ, ಶೈಕ್ಷಣಿಕವಾಗಿ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ಸಾಹಿತಿ  ಮತ್ತು ಸಂಘಟಕರಾಗಿ ವಿವಿಧ ಪ್ರಶಸ್ತಿಗಳನ್ನು ಪಡೆದಿರುವವರು  ಪಿ. ವಿ. ಆನಂದ್ ಸಾಲಿಗ್ರಾಮ ಪ್ರಸ್ತುತ ಇಲಾಖೆಯ ನಿರ್ದೇಶನದಂತೆ  ಒಂದು ತಿಂಗಳ ಒಳಗೆ ಈ ಸಂಪುಟ ರಚನೆ ಮಾಡಬೇಕಾಗಿ ಇರುವುದರಿಂದ ಕಾರ್ಕಳ ತಾಲೂಕಿನ ಎಲ್ಲ ಇಲಾಖೆಗಳು, ಸಂಘ ಸಂಸ್ಥೆಗಳು ತಮ್ಮ ಕಾರ್ಯ ಚಟುವಟಿಕೆಯ ಮಾಹಿತಿಯನ್ನು ಸಕಾಲಕ್ಕೆ ನೀಡಬೇಕೆಂದು ವಿನಂತಿಸಲಾಗಿದೆ. ಮಾಹಿತಿಗಳನ್ನು Ba.com ಇಲ್ಲಿಗೆ ರವಾನಿಸಬಹುದು.
ಹೆಚ್ಚಿನ ಮಾಹಿತಿಗೆ 9743218708 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News