×
Ad

ಬೆಂಗಳೂರು: ಕನ್ನಡ ರಾಜ್ಯೋತ್ಸವದಂದು ಪೊಲೀಸ್‌ ಠಾಣೆಗಳಲ್ಲಿ ನೂತನ ಗ್ರಂಥಾಲಯ ಆರಂಭ

Update: 2022-11-01 19:12 IST

ಬೆಂಗಳೂರು, ನ.1:ಆಗ್ನೇಯ ವಿಭಾಗದ ಪೊಲೀಸರು ಕನ್ನಡ ರಾಜ್ಯೋತ್ಸವದಂದು  ನೂತನ ಗ್ರಂಥಾಲಯ ಆರಂಭಿಸಿ ಅರ್ಥಪೂರ್ಣವಾಗಿ ಆಚರಿಸಿದರು.

ಮಂಗಳವಾರ ಇಲ್ಲಿನ ಕೋರಮಂಗಲ, ಮೈಕೊ ಲೇಔಟ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಠಾಣೆಗಳಲ್ಲಿ ಗ್ರಂಥಾಲಯಗಳನ್ನು ಉದ್ಘಾಟಿಸಿದ ಹಿರಿಯ ನಾಗರಿಕರು, ಜನರ ಸೇವೆಗೆ ಮುಕ್ತಗೊಳಿಸಿದರು.

ರಾಷ್ಟ್ರ ಕವಿ ಕುವೆಂಪು, ದ.ರಾ.ಬೇಂದ್ರೆ, ಚಂದ್ರಶೇಖರ್ ಕಂಬಾರ ಸೇರಿದಂತೆ ವಿವಿಧ ಸಾಹಿತಿಗಳ ಪುಸ್ತಕಗಳು ಹಾಗೂ ದಿನಪತ್ರಿಕೆಗಳು ಗ್ರಂಥಾಲಯದಲ್ಲಿ ಲಭ್ಯವಿರಲಿವೆ. ಠಾಣೆಗೆ ಬರುವ  ಪ್ರತಿಯೊಬ್ಬರು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಪಡೆದುಕೊಂಡು ಓದಲು ಅವಕಾಶ ನೀಡಲಾಗುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಹೇಳಿದರು.

Similar News