ಸ್ಥಳೀಯರಿಗೆ ಜಾರಿಯಾಗದ ಉದ್ಯೋಗ ನೀತಿ: ಪ್ರೊ.ಬರಗೂರು ರಾಮಚಂದ್ರಪ್ಪ ಬೇಸರ

Update: 2022-11-01 13:45 GMT

ಬೆಂಗಳೂರು, ನ.1: ಆರು ದಶಕಗಳ ಹಿಂದೆಯೇ ರಾಷ್ಟ್ರೀಯ ಭಾವೈಕ್ಯ ಸಮಿತಿ ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ವರದಿ ನೀಡಿದ್ದರೂ ಇದುವರೆಗೂ ಅನುಷ್ಠಾನವಾಗದಿರುವುದು ವಿಷಾದನೀಯ ಎಂದು ಬಂಡಾಯ ಸಾಹಿತಿ ಪ್ರೊ .ಬರಗೂರು ರಾಮಚಂದ್ರಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ಸಮಿತಿಯ 44ನೆ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಹೋರಾಟದ ಆದ್ಯತೆ ಬದಲಾಗಬೇಕಿದೆ. ಅದಕ್ಕಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಿ ಒಟ್ಟಾಗಿ ಹೋರಾಟ ರೂಪಿಸುವ ಅತ್ಯವಿದೆ ಎಂದು ಅಭಿಪ್ರಾಯಪಟ್ಟರು. ವಿವಿಧತೆಯಲ್ಲಿ ಏಕತೆ ಕಾಣುವುದೆ ಸೌಂದರ್ಯ. ಕನ್ನಡ ಭಾಷೆಯನ್ನು ಜನರ ಮುಖಾಂತರ ನೋಡುವ ಹಾಗೂ ಕಟ್ಟುವ ಕೆಲಸವಾಗಬೇಕು ಎಂದು ಹೇಳಿದರು.

ನಿಡುಮಾಮಿಡಿ ಮಹಾಸಂಸ್ಥಾನದ ಪೀಠಾಧ್ಯಕ್ಷ ವೀರಭದ್ರಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿ, ಮೊಟ್ಟಮೊದಲಿಗೆ ಜಚನಿ ಸ್ವಾಮೀಜಿಯವರು ಕನ್ನಡ ಕಟ್ಟಾಳು ಬಿರುದನ್ನು ಅ.ನ. ಕೃಷ್ಣರಾವ್ ಅವರಿಗೆ ನೀಡಿದ್ದರು ಎಂದು ಹೇಳಿದರು. 

Similar News