×
Ad

ತೋಡಾರ್‌ನಲ್ಲಿ ಕಲೋತ್ಸವ

Update: 2022-11-03 22:37 IST

ಮಂಗಳೂರು : ತೋಡಾರಿನ ಶಮ್ಸ್ ವಿದ್ಯಾರ್ಥಿ ಒಕ್ಕೂಟ ಹಾಗೂ ಶಂಸುಲ್ ಉಲಮಾ ಅರಬಿಕ್ ಕಾಲೇಜು ಇದರ ವತಿಯಿಂದ ಇತ್ತೀಚೆಗೆ ಕಲೋತ್ಸವ ನಡೆಯಿತು.

ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕರು ಯು.ಟಿ. ಖಾದರ್ ಕಲೋತ್ಸವ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಮುಫ್ತಿ ರಫೀಕ್ ಅಹ್ಮದ್ ಹುದವಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯದರ್ಶಿ ಸರ್ಫ್ರಾಝ್ ಹಾಗೂ ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಲೀಂ ಅಲವಂಡಿ ಪಾಲ್ಗೊಂಡಿದ್ದರು. ಜೈನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮುನಿರಾಜ್ ರೆಂಜಾಲ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

Similar News